ಧಾರವಾಡ: ಡಾ. ಶರಣಪ್ಪ ಕೊಟಗಿ ಜನ್ಮದಿನ ನಿಮಿತ್ತ ಇಲ್ಲಿನ ಸತ್ತೂರಿನ ಶ್ರೀ ಬಸವೇಶ್ವರ ರೂರಲ್ ಎಜ್ಯುಕೇಷನ್ ಆ್ಯಂಡ್ ಡೆವಲಪ್‌ಮೆಂಟ್ ಟ್ರಸ್ಟ್, ಶ್ರೀ ಸತ್ಯಸಾಯಿ ಕಾಲೇಜ ಆಫ್ ಹೋಮಿಯೋಪಥಿಕ್ ಮೆಡಿಕಲ್ ಸೈನ್ಸ್ ಆ್ಯಂಡ್ ಹಾಸ್ಪಿಟಲ್ ವತಿಯಿಂದ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರವನ್ನು ಇತ್ತೀಚೆಗೆ ನಡೆಸಲಾಯಿತು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಸುಳ್ಳ ಹಿರೇಮಠ ಪಂಚಗೃಹ ಸಂಸ್ಥಾನದ ಶ್ರೀ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶರಣಪ್ಪ ಕೊಟಗಿ ಹುಟ್ಟು ಹಾಕಿದ ಸಂಸ್ಥೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ. ಉತ್ತಮ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಒಳ್ಳೆ ನಾಗರಿಕರಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದರು.
ಶ್ರೇಯ ಜನಸೇವಾ ಸಂಸ್ಥೆ ಉಪಾಧ್ಯಕ್ಷ ವಿ.ಜಿ. ಪಾಟೀಲ, ಹೋಮಿಯೋಪಥಿ ಕಾಲೇಜಿನ ಪ್ರಾಚಾರ್ಯೆ ಡಾ. ಸರೋಜಿನಿ ದೇಸಾಯಿ, ಡಾ. ರಾಮಚಂದ್ರ ಕಾರಟಗಿ, ಡಾ. ಸತೀಶ ಇರಕಲ್, ಡಾ. ವರ್ಷ ಬಂಗಾರಶೆಟ್ಟರ್, ವಿ.ಎಂ. ಹಿರೇಮಠ, ನೂರಾರು ವಿದ್ಯಾರ್ಥಿಗಳು, ಕೊಟಗಿ ಅಭಿಮಾನಿಗಳು ರಕ್ತದಾನ ಮಾಡಿದರು.
ಮೋಹನ ಹೊಸಮನಿ, ಮೃತ್ಯುಂಜಯ ಕೊಟಗಿ, ನಾಗರಾಜ ಕೊಟಗಿ, ಪ್ರವೀಣ ಕೊಟಗಿ, ಡಾ. ಕಿರಣ ಸಾಣಿಕೊಪ್ಪ, ಡಾ. ಎನ್.ಎಸ್. ದೊಡ್ಡಮನಿ, ಡಾ. ಆನಂದ ರಾಮದುರ್ಗ, ಡಾ. ಸೋಹನ ಮನಗುತ್ತಿ, ಡಾ. ವಾಸಿಂ ಅಕ್ರಮ, ಡಾ. ಪ್ರದೀಪ ಕಮ್ಮಾರ, ಡಾ. ಸಂಜನಾ ನಾಯಕ, ಇತರರು ಇದ್ದರು.
ಗೌರಿ ಬಟ್ಟೂರು ನಿರೂಪಿಸಿದರು. ವಿಶಾಲ ಡಿ. ಸ್ವಾಗತಿಸಿದರು. ಮಂಜುಳಾ ವಂದಿಸಿದರು.