ಚಿಕ್ಕಮಗಳೂರಿನ ಚಿಕ್ಕೊಳಲೆ ಸದಾಶಿವಶಾಸ್ತಿç ಸಭಾಂಗಣದಲ್ಲಿ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ, ಜಂಗಮಬಳಗ ಮತ್ತು ಶ್ರೀಪಾರ್ವತಿ ಮಹಿಳಾ ಮಂಡಳಿಯಿAದ ಶ್ರೀಸುವರ್ಣಾದೇವಿ ಸಂಸ್ಮರಣೆ ಹಿನ್ನಲೆಯಲ್ಲಿ ಸಂಸ್ಕೃತಿ ರಕ್ಷಣೆಯಲ್ಲಿ ತೊಡಗಿರುವ ಸಾಧಕ ಮಹಿಳೆಯರಿಗೆ ಕೊಡಮಾಡುವ ಮಹಿಳಾರತ್ನ ಪ್ರಶಸ್ತಿಯನ್ನು ಶ್ರೀದೇವಿ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಜಿ.ಸುಧಾ ಚಂದ್ರಮೌಳಿ ಮತ್ತು ಅಕ್ಕನಬಳಗದ ಕಾರ್ಯದರ್ಶಿ ಆಶಾ ಹೇಮಂತಕುಮಾರ್ ಅವರಿಗೆ ಪ್ರದಾನ ಮಾಡಲಾಯಿತು. ಸಿ.ಟಿ.ರವಿ ಉಪಸ್ಥಿತರಿದ್ದರು. 
ಜಿಲ್ಲೆ

ಸಂಸ್ಕೃತಿಯ ಬೇರು ಗಟ್ಟಿಗೊಳಿಸಬೇಕು

ಚಿಕ್ಕಮಗಳೂರು: ವ್ಯಕ್ತಿಗತ ಲಾಭನಷ್ಟದ ಲೆಕ್ಕಚಾರದಲ್ಲಿ ಸಮಾಜಜೀವನ ದುರ್ಬಲಗೊಳ್ಳುತ್ತಿದೆ. ಸಂಸ್ಕೃತಿಯ ಬೇರುಗಳನ್ನು ಗಟ್ಟಿಗೊಳಿಸುವ ಕಾರ್ಯ ವ್ಯಾಪಕಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಭಿಪ್ರಾಯಪಟ್ಟರು.

ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ, ಜಂಗಮಬಳಗ ಮತ್ತು ಶ್ರೀಪಾರ್ವತಿ ಮಹಿಳಾ ಮಂಡಳಿಯಿAದ ಚಿಕ್ಕೊಳಲೆ ಸದಾಶಿವಶಾಸ್ತಿç ಸಭಾಂಗಣದಲ್ಲಿ ಶ್ರೀಸುವರ್ಣಾದೇವಿ ಸಂಸ್ಮರಣೆ ಹಿನ್ನಲೆಯಲ್ಲಿ ಸಂಸ್ಕೃತಿ ರಕ್ಷಣೆಯಲ್ಲಿ ತೊಡಗಿರುವ ಸಾಧಕ ಮಹಿಳೆಯರಿಗೆ ಕೊಡಮಾಡುವ ಮಹಿಳಾರತ್ನ ಪ್ರಶಸ್ತಿಯನ್ನು ಶ್ರೀದೇವಿ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಜಿ.ಸುಧಾ ಚಂದ್ರಮೌಳಿ ಮತ್ತು ಅಕ್ಕನಬಳಗದ ಕಾರ್ಯದರ್ಶಿ ಆಶಾ ಹೇಮಂತಕುಮಾರ್ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.

ಸಮಾಜದಲ್ಲಿ ಸಕಾರಾತ್ಮಕವಾದ ಪರಿವರ್ತನೆ ತರುವ ಕೆಲಸ ವೈಯಕ್ತಿಕ ನೆಲೆಯಲ್ಲಿ ಸಣ್ಣ ಪ್ರಮಾಣದಲ್ಲಾದರೂ ಆಗಬೇಕು. ಸತ್ಯ ಮತ್ತು ಸೇವೆಯ ತಳಹದಿಯ ಜೀವನಪದ್ಧತಿ ನಮ್ಮದು. ಧರ್ಮಿಷ್ಠರಾದವರು ಜಗತ್ತಿಗೆ ಒಳಿತನ್ನೆ ಮಾಡುತ್ತಾರೆ. ಪಾಶ್ಚಾತ್ಯರು ಮಾತ್ರ ಮತಾಂಧರಾಗಲು ಸಾಧ್ಯ. ಒಳಿತನ್ನು ಗುರುತಿಸುವ ಪ್ರೇರೇಪಿಸುವ ಕಾರ್ಯ ಮಹಾತಾಯಿಯ ಹೆಸರಿನಲ್ಲಿ ನಿರಂತರವಾಗಿ ನಡೆಯುತ್ತಿರುವುದು ಮಾದರಿ ಎಂದರು.

ಒಳಿತನ್ನು ಎಲ್ಲೆಡೆಯಿಂದ ಸ್ವೀಕರಿಸುವ ಉದಾತ್ತ ಸಮಾಜ ನಮ್ಮದು. ಅಂಧ ಅನುಕರಣೆ, ಬೇಡದ ಆಚರಣೆ ಇಂದು ನಮ್ಮನ್ನು ಹೆಚ್ಚಾಗಿ ಆಕರ್ಷಿಸುತ್ತಿರುವುದು ಆತಂಕದಾಯಕ. ವ್ಯಕ್ತಿಗತ ಲಾಭ-ನಷ್ಟವೇ ಹೆಚ್ಚಾಗಿ ಸಮಾಜಹಿತ ಗಮನಿಸದಿರುವ ಸಂಗತಿ ಸುತ್ತಲೂ ಕಾಣುತ್ತಿz್ದೆÃವೆ. ಶುಭಾಶಯಗಳನ್ನು ಕೋರುವುದು ತಪ್ಪಲ್ಲ. ಆದರೆ ದೀಪ ಆರಿಸುವುದು ಅಮಂಗಳಕರ. ತಂದೆ-ತಾಯಿಯರಿಗೆ, ಗುರು-ಹಿರಿಯರಿಗೆ ನಮಸ್ಕರಿಸುವುದು ನಮ್ಮ ಸಂಪ್ರದಾಯ. ಇದರಲ್ಲಿ ನಮ್ಮ ಅಹಂಕಾರ ಕಳೆದುಕೊಳ್ಳುವುದರ ಜೊತೆಗೆ ಆಶೀರ್ವಾದ ಪಡೆದಂತಾಗುತ್ತದೆ ಎಂದು ಹೇಳಿದರು.

ಎಳ್ಳುಬೆಲ್ಲ ಬೀರಿ ಒಳ್ಳೆಯ ಮಾತನಾಡಿ ಎನ್ನುತ್ತೇವೆ. ಬೇವುಬೆಲ್ಲ ಹಂಚಿ ಕಷ್ಟಸುಖ ಸಮಾನವಾಗಿ ಸ್ವೀಕರಿಸಬೇಕೆಂಬ ಸಂದೇಶ ನಮ್ಮ ಪದ್ಧತಿ. ಡಿಸೆಂಬರ್ ೩೧ರ ಪರಿಪಾಠ ಮಾಧ್ಯಮಗಳಲ್ಲಿ ನೋಡಿz್ದÉÃವೆ. ಕುಡಿದು ಕುಣಿದು ತೂರಾಡಿ ಮನೆಗೆ ಹೋಗಲು ಆಗದಸ್ಥಿತಿ ಇತ್ತು. ಒಂದೇ ದಿನ ೪೮೦ಕೋಟಿ ರೂ. ಮದ್ಯದ ವಹಿವಾಟು ನಡೆದಿದೆ ಎಂಬುದು ಆತಂಕಕಾರಿ ಸಂಗತಿ. ಇದಕ್ಕೆ ಪರ್ಯಾಯವನ್ನು ಗಟ್ಟಿಗೊಳಿಸುವ ಮೂಲಕ ಒಳ್ಳೆಯ ಸಂಗತಿಗಳನ್ನು ವ್ಯಾಪಕಗೊಳಿಸಬೇಕು ಎಂದರು.

ಸAಸ್ಕೃತಿಯ ಹೆಸರಿನಲ್ಲಿ ವಿಕೃತಿ ವಿಜೃಂಭಿಸಬಾರದು. ಸೈನ್ಯದೊಳಗೆಲ್ಲ ಸಂಸ್ಕೃತಿನಾಶಕರೆ ಸೇರಿದರೆ, ಪೊಲೀಸ್ ವ್ಯವಸ್ಥೆಯಲ್ಲಿ ಅನ್ಯಾಯ ಮಾಡುವವರೆ ಸೇರಿದರೆ, ಮತಾಂಧರುಗಳೆ ತೀರ್ಪು ಕೊಡುವ ಸ್ಥಾನಗಳಲ್ಲಿ ನಿಂತರೆ ಭಾರತದ ತಾಲಿಬಾಲೀಕರಣವಾಗುವುದು ತಡವಾಗುವುದಿಲ್ಲ. ಕೊಡಗಿನಲ್ಲಿ ಹಿಂದೆಲ್ಲ ಮನೆಗೊಬ್ಬಿಬ್ಬರು ಸೈನ್ಯದಲ್ಲಿರುತ್ತಿದ್ದರು. ಆದರೆ ಈಗ ಆ ಸ್ಥಿತಿ ಇಲ್ಲ. ಈಗೆಲ್ಲಾ ಕುಟುಂಬದಲ್ಲಿ ಇರುವವರೆ ಒಬ್ಬಿಬ್ಬರು ಮಕ್ಕಳು. ಮಕ್ಕಳು ಹುಟ್ಟುವ ಮೊದಲೇ ಏನಾಗಬೇಕೆಂಬ ವಿನ್ಯಾಸ ನಾವೇ ಸಿದ್ಧಪಡಿಸಿರುತ್ತೇವೆ. ಎಲ್ಲರೂ ಇಂಜಿನಿಯರ್, ವೈದೈರುಗಳೇ. ಆದರೆ ಸೈನಿಕ, ರೈತರ ಅವಶ್ಯಕತೆ ಸಮಾಜಕ್ಕಿಲ್ಲವೇ ಎಂಬುದನ್ನು ಅವಲೋಕಿಸಬೇಕು. ಸಮಾಜದಲ್ಲಿ ನಾವೆಲ್ಲ ಘಟಕಗಳು. ಮನೆ ಪ್ರತ್ಯೇಕವಾಗಿ ಉಳಿಯುವುದಿಲ್ಲ. ಮೈಮರೆತು ಕುಳಿತರೆ ಸಂಕಷ್ಟ ತಪ್ಪಿದ್ದಲ್ಲ ಎಂದರು.

ಕಾರ್ಜುವಳ್ಳಿ ಹಿರೇಮಠದ ಶ್ರೀ. ಷ.ಬ್ರ.ಸದಾಶಿವ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀದೇವಿ ಗುರುಕುಲದ ಸಂಸ್ಥಾಪಕ ವೇ.ಬ್ರ.ಡಾ.ದಯಾನಂದಮೂರ್ತಿಶಾಸ್ತಿç ಪ್ರಶಸ್ತಿಪತ್ರ ವಾಚಿಸಿದರು. ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತಿç, ಹಾಸನದ ಮಂಜುನಾಥ, ಆಲೂರಿನ ಯಶವಂತ, ಶ್ರೀ ಪಾರ್ವತಿ ಮಹಿಳಾಮಂಡಳಿ ಅಧ್ಯಕ್ಷೆ ಸುಮಿತ್ರಾಶಾಸ್ತಿç, ಕಾರ್ಯದರ್ಶಿ ಭವಾನಿ ವಿಜಯಾನಂದ, ವೀರಶೈವ ಲಿಂಗಾಯತ ಜಾಗೃತ ವೇದಿಕೆ ತಾಲೂಕು ಕುಮಹಿಳಾ ಘಟಕದ ಅಧ್ಯಕ್ಷೆ ಗೀತಾಬಾಲಿ ಮತ್ತಿತರರಿದ್ದರು.