ಯಕ್ಸಂಬಾ, ಬೆಳಗಾವಿ: ಹಬ್ಬ ಹರಿದಿನಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ ಎಂದು ಖಡಕಲಾಟದ ಶಿವಬಸವ ಸ್ವಾಮೀಜಿ ಹೇಳಿದರು. ಇಲ್ಲಿನ ರಾಜರಾಜೇಶ್ವರಿ ನಾಡಹಬ್ಬ ಉತ್ಸವ ಸಮಿತಿ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ನಾಡಹಬ್ಬ ಉತ್ಸವ ಹಾಗೂ ಕನ್ನಡ ಜಾತ್ರೆ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು, ನಾಡಹಬ್ಬ ದಸರಾ ಉತ್ಸವ ನಮ್ಮ ಭಾರತೀಯ ಸಂಸ್ಕೃತಿಯ ದ್ಯೋತಕ ಎಂದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಪ್ರತಿಯೊಂದು ಹಬ್ಬಗಳಿಂದ ನಮಗೆ ಪ್ರೇರಣೆ ದೊರೆಯುತ್ತಿದ್ದು, ನಮ್ಮ ಹಬ್ಬಗಳೇ ನಮಗೆ ದಾರಿದೀಪಗಳಾಗಿವೆ ಎಂದರು. ಬಸವೇಶ್ವರ ಕಲ್ಯಾಣ ಮಂಟಪದಿಂದ ಮಹಾದೇವ ಮಂದಿರದವರೆಗೆ ನಾಡದೇವಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಜರುಗಿತು. ಶಾಸಕ ಗಣೇಶ ಹುಕ್ಕೇರಿ ಮಾತನಾಡಿದರು. ಮಾಜಿ ಶಾಸಕ ಅಜೀತಸಿಂಹ ನಿಂಬಾಳ್ಕರ, ಪಂಚಾಕ್ಷರಿ ಮಠಪತಿ, ದೀಲಿಪ ದೇಸಾಯಿ, ಮಾರುತಿ ಮಾನೆ, ಉಮೇಶ ಸಾತ್ವರ, ಶೇಖರ ಉಮರಾಣೆ, ಸಂತೋಷ ಅಲಗುರೆ, ಭೀಮಾ ಹಿಟಣೆ, ಬಾಲಚಂದ್ರ ಬಾಕಳೆ, ಕುಮಾರ ಕುಂಬಾರ, ದುಂಡಪ್ಪ ಹಿಟಣೆ, ಜಗದೀಶ ಮಠದ, ಮಲ್ಲಯ್ಯ ವಸದ, ರವಿ ಖೋತ, ಸಂತೋಷ ಹಿಟಣೆ, ಗುರು ಪಾಟೀಲ, ರಂಜಿತ ರಾಯಜಾಧವ, ಗೋಟು ಶಿಂಧೆ ಇತರರಿದ್ದರು.
ಶ್ರೀಮಂತಿಕೆಗಿಂತ ನೆಮ್ಮದಿ ಮುಖ್ಯ: ತೆಲಸಂಗ: ಅಂತರಂಗ ಅರಿಯುವ ದೊಡ್ಡ ಆಗರವೇ ಪುರಾಣ, ಪ್ರವಚನಗಳು ಎಂದು ಹಿರೇಮಠದ ವೀರೇಶ್ವರ ಸ್ವಾಮೀಜಿ ಹೇಳಿದರು.ಗ್ರಾಮದ ಹಿರೇಮಠದಲ್ಲಿ ನವರಾತ್ರಿ ಉತ್ಸವಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿ, ಕಷ್ಟಗಳನ್ನೇ ನೆನೆದು ಬರಿ ಕಣ್ಣೀರು ಸುರಿಸುವ ಬದಲು ಬೆವರು ಸುರಿಸಿ ದುಡಿದರೆ ಚರಿತ್ರೆ ಸೃಷ್ಟಿಸುವಿರಿ. ಮಾನಸಿಕ ನೆಮ್ಮದಿಗಿಂತ ದೊಡ್ಡ ಶ್ರೀಮಂತಿಕೆ ಇನ್ನೊಂದಿಲ್ಲ ಎಂದರು. ಅಕ್ಕಲಕೋಟದ ಚೆನ್ನಬಸವ ಸ್ವಾಮೀಜಿ ಮಾತನಾಡಿ, ಮನಸ್ಸಿಟ್ಟು ಕಲಿತ ಅಕ್ಷರ, ಮೈ ಬಗ್ಗಿಸಿ ದುಡಿದು ತಿನ್ನುವ ಅನ್ನ, ಕಷ್ಟಪಟ್ಟು ಗಳಿಸಿದ ಸಂಪಾದನೆ, ಇಷ್ಟಪಟ್ಟು ಮಾಡುವ ದೈವಭಕ್ತಿ ಯಾರನ್ನು ಯಾವತ್ತೂ ಕೈ ಬಿಡುವುದಿಲ್ಲ. ಮನಸ್ಸು ಸ್ವಚ್ಛವಾಗಿದ್ದರೆ ನೋಡುವ ನೋಟವೆಲ್ಲ ಸುಂದರವಾಗಿ ಕಾಣುತ್ತದೆ ಎಂದರು. ನಿವೃತ್ತ ಸೈನಿಕರಾದ ಗಂಗಪ್ಪ ಗಂಗಾಧರ, ಸಾಬು ಅರಟಾಳ, ಗ್ರಾಪಂ ಉಪಾಧ್ಯಕ್ಷೆ ಮೀನಾಕ್ಷಿ ಬಾಣಿ, ಬಸವರಾಜ ರೋಡಗಿ, ಈಶ್ವರ ಉಂಡೋಡಿ ಇದ್ದರು.