ಕಲಬುರಗಿ: ಜ್ಞಾನ ಸಂಕೇತ ದೀಪ ದುಷ್ಟರ ನಿಗ್ರಹದ ಸಂದೇಶ ಸಾರುತ್ತದೆ. ರಾಷ್ಟç ವಿರೋಧಿ ಶಕ್ತಿಗಳು ನಮ್ಮ ಆಚರಣೆ ನಿಂದಿಸುತ್ತ, ಅವಹೇಳನ ಮಾಡುವ ಮಾನಸಿಕತೆ ಮೂಡಿಸಿಕೊಂಡಿದ್ದು, ಅದರ ಪ್ರಭಾವ ಕಡಿಮೆ ಮಾಡಿ, ಗತ ವೈಭವ ಪ್ರತಿಷ್ಠಾಪಿಸಬೇಕಿದೆ ಎಂದು ಆರ್‌ಎಸ್‌ಎಸ್‌ನ ಕೃಷ್ಣಾ ಜೋಶಿ ಹೇಳಿದರು.
ಶರಣ ಸಿರಸಗಿಯಲ್ಲಿರುವ ರಾಷ್ಟೊçÃತ್ಥಾನ ವಿದ್ಯಾ ಕೇಂದ್ರದಲ್ಲಿ ಮಂಗಳವಾರ ತುಳಸಿ ವಿವಾಹ ಹಾಗೂ ಕಾರ್ತಿಕ ದೀಪೋತ್ಸವದಲ್ಲಿ ಮಾತನಾಡಿ, ಮಕ್ಕಳಲ್ಲಿ ಹಬ್ಬಗಳ ಹಿನ್ನೆಲೆ, ಮಹತ್ವ ಹಾಗೂ ಭಾವದ ಅರಿವು ಮೂಡಿಸಬೇಕು. ಈ ದಿಸೆಯಲ್ಲಿ ನಮ್ಮ ಪ್ರಯತ್ನ ನಿರಂತರವಾಗಿರಬೇಕು ಎಂದು ತಿಳಿಸಿದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಪಾಲಕರು ಮಕ್ಕಳೊಂದಿಗೆ ದೀಪ ಪ್ರಜ್ವಲಿಸಿದರು. ಕೆ.ವಿ.ಪರಮೇಶ್ವರ, ಪ್ರಧಾನಾಚಾರ್ಯ ಗಿರೀಶ ಜೋಶಿ, ಆಡಳಿತಾಧಿಕಾರಿ ಶ್ರೀಕಾಂತ ಪಾಟೀಲ್, ಶೈಕ್ಷಣಿಕ ಸಂಯೋಜಕ ರವಿಕುಮಾರ ಇತರರಿದ್ದರು. ಸಂಸ್ಕೃತ ಅಧ್ಯಾಪಕ ಶ್ರೀಕಾಂತ ಶರ್ಮ ಪೂಜೆ ನೆರವೇರಿಸಿದರು, ಶಾಂತಕುಮಾರಿ ಸ್ವಾಗತಿಸಿದರು. ಸುಜಾತಾ ಲಚ್ಯಾಣಕರ್ ನಿರೂಪಣೆ ಮಾಡಿದರು.