ಹುಲಸೂರು: ವೈಜ್ಞಾನಿಕ ಪ್ರಭಾವದಿಂದ ಯುವ ಜನಾಂಗ ನಮ್ಮ ಸಂಸ್ಕೃತಿ, ಪರಂಪರೆ ಮರೆಯುತ್ತಿರುವುದು ವಿಷಾದನೀಯ ಎಂದು ಜಾಗತಿಕ ಲಿಂಗಾಯತ ಮಹಾ ಸಭೆಯ ಜಿಲ್ಲಾ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.
ಪಟ್ಟಣದ ಗುರು ಬಸವೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾ ಸಭಾ, ಬಸವ ಕೇಂದ್ರ, ಬಸವೇಶ್ವರ ಅಭಿವೃದ್ಧಿ ಟ್ರಸ್ಟ್, ಬಸವ ಉತ್ಸವ ಸಮಿತಿ ಸಹಯೋಗದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಸಾಂಸ್ಕೃತಿಕ ನಾಯಕ ವಿಶ್ವ ಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಯುವಕರು ಶರಣರ ತತ್ವ, ಸಿದ್ಧಾಂತಗಳ ಅರಿವು ಇಲ್ಲದೆ ಮೆರವಣಿಗೆಯಲ್ಲಿ ಡಿಜೆ ಅಳವಡಿಸಿ ಇತರೆ ಸಮುದಾಯದವರಲ್ಲಿ ದ್ವೇಷ ಬಿತ್ತುವ ಹಾಡುಗಳ ಮೂಲಕ ಕುಣಿದು ಕುಪ್ಪಳಿಸುವ ಸಂಪ್ರದಾಯ ಬೆಳೆಸಿಕೊಂಡು ಬರುತ್ತಿರುವುದು ಚಿಂತೆಗೆ ಕಾರಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವಚನ ಗೀತೆ ಅಳವಡಿಸಿ ಪ್ರಸಾರ ಮಾಡುವುದು ಇಲ್ಲವೇ ಡಿಜೆ ಅಳವಡಿಕೆ ತಗುಲುವ ವೆಚ್ಚದಲ್ಲಿ ಹಸಿದವರಿಗೆ ಪ್ರಸಾದ, ಅಸಹಾಯಕ ಜನರಿಗೆ ನೆರವು ನೀಡುವ ಸಂಸ್ಕೃತಿ ಬರಬೇಕು. ಬಸವ ತತ್ವ ಹಳ್ಳಿ ಹಳ್ಳಿಗಳಿಗೆ ಮುಟ್ಟಬೇಕು. ಅದಕ್ಕೆ ಯುವ ಜನತೆ ಜಾಗೃತರಾಗಬೇಕು ಎಂದು ತಿಳಿಸಿದರು.
ಬಸವ ಕೇಂದ್ರ ಜಿಲ್ಲಾ ಅಧ್ಯಕ್ಷ ಶರಣಪ್ಪ ಮಿಠಾರೆ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿದರು.
ಗುರುಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪ್ರೋ.ಮೀನಾಕ್ಷಿ ಬಿರಾದಾರ ವಿಶೇಷ ಉಪನ್ಯಾಸ ನೀಡಿದರು. ಬಸವ ಕೇಂದ್ರ ತಾಲೂಕು ಅಧ್ಯಕ್ಷ ಆಕಾಶ ಖಂಡಾಳೆ, ಶ್ವೇತಾ ಭೂಜಂಗೆ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ದೀಪಾ ರಾಣಿ ಬೋಸ್ಲೆ, ಜಿಪಂ ಮಾಜಿ ಅಧ್ಯಕ್ಷರಾದ ಅನೀಲ ಭೂಸಾರೆ, ಸುಧೀರ ಕಾಡಾದಿ, ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷೆ ಲತಾ ಹಾರಕೂಡೆ, ಶಬೀರ್ ಸಾಬ್ ಮುಜಾವರ್, ದತ್ತು ರಾಘೋ, ಸತೀಶ ಸ್ವಾಮಿ, ಬಸವರಾಜ ಕಾಡಾದಿ, ಶಿವಕುಮಾರ ಕೌಟೆ, ಮಹಾದೇವ ಮಹಾಜನ, ರೇಖಾ ಕಾಡಾದಿ, ಬಬಿತಾ ಬಡುರೆ ಇತರರಿದ್ದರು. ರಾಜಕುಮಾರ ತೊಂಡಾರೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಣೆ ಮಾಡಿದರು.
ಅದ್ದೂರಿ ಮೆರವಣಿಗೆ: ಪಟ್ಟಣದಲ್ಲಿ ವಿಶ್ವ ಗುರು ಬಸವ ಜಯಂತಿ ನಿಮಿತ್ತ ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆಗೆ ಗ್ರಾಪಂ ಅಧ್ಯಕ್ಷೆ ದೀಪಾರಾಣಿ ಭೋಸ್ಲೆ ಬಸವಣ್ಣನವರ ಪ್ರತಿಮೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಶಿವಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಜಾಗತಿಕ ಲಿಂಗಾಯತ ಮಹಾ ಸಭೆಯ ತಾಲೂಕು ಅಧ್ಯಕ್ಷ ಪ್ರವೀಣ ಕಾಡಾದಿ, ಬಸವಕೇಂದ್ರ ತಾಲೂಕು ಅಧ್ಯಕ್ಷ ಆಕಾಶ ಖಂಡಾಳೆ, ವಚನ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ರಾಜಕುಮಾರ ತೊಂಡಾರೆ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶ್ರೀದೇವಿ ಕಾಡಾದಿ, ಜಿಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ಸುಧೀರ ಕಾಡಾದಿ, ಪಿಕೆಪಿಎಸ್ ಅಧ್ಯಕ್ಷ ಎಂ ಜಿ ರಾಜೋಳೆ, ಬಸವರಾಜ ಡೊಣಗಾಂವಕರ, ಬಾಳು ಕಾಡಾದಿ, ಶಿವಕುಮಾರ ಬಿರಾದಾರ, ಜಗನ್ನಾಥ ಪಾಟೀಲ, ರವಿ ಕೊಳಕೂರ, ಸಂತೋಷ ಗಾಯಕವಾಡ, ಅರವಿಂದ ಹರಿಪಲ್ಲೆ ಕೈಲಾಸ ಪಾರಶೆಟ್ಟಿ, ಬಸವರಾಜ ಭೋಪಳೆ, ಸೋಮನಾಥ ನಂದಗೆ, ರಮೇಶ ಭೊಪಳೆ, ರಾಜಕುಮಾರ ನೀಡೊದೆ ಮತ್ತು ಬಸವ ಭಕ್ತರು ಪಾಲ್ಗೊಂಡಿದ್ದರು.