ಚಿಕ್ಕೋಡಿ: ಸಂಸ್ಕೃತ ಭಾಷೆ ಜೀವಂತಗೊಳಿಸುವ ಮೂಲಕ ರಾಷ್ಟ್ರ ಪ್ರಬಲವಾಗಿಸಬೇಕಿದೆ ಎಂದು ಸಂಸ್ಕೃತಭಾರತಿ ಪ್ರಾಂತ ಪ್ರಮುಖ ಶ್ರೀಕಾಂತ ಕುಲಕರ್ಣಿ ಹೇಳಿದರು.
ತಾಲೂಕಿನ ಕುಂದ ಕುಂದಾಚಾರ್ಯ ಶಾಲೆಯಲ್ಲಿ ೧೦ ದಿನಗಳ ಕಾಲ ಆಯೋಜಿಸಿದ್ದ ಸಂಸ್ಕೃತ ಸಂಭಾಷಣ ಶಿಬಿರದ ಸಮಾರೋಪ ಸಮಾರಂಭ ಉದ್ದೇಶಿಸಿ ಈಚೆಗೆ ಮಾತನಾಡಿ, ನಾಗರಿಕರಲ್ಲಿನ ಒಗ್ಗಟ್ಟು ಒಡೆಯುವ ಪ್ರಯತ್ನ ನಡೆಯುತ್ತಿದೆ. ಆದ್ದರಿಂದ ಸಂಸ್ಕೃತ ಭಾಷೆ ಮೂಲಕ ರಾಷ್ಟ್ರೀಯ ಏಕತೆ ಪ್ರಬಲಗೊಳಿಸುವ ನಿಟ್ಟಿನಲ್ಲಿ ಸಂಸ್ಕೃತಭಾರತಿ ಸ್ವಯಂ ಸೇವಾ ಸಂಘಟಣೆ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.
ಶಿವರಾಮ ಕುಲಕರ್ಣಿ ಮಾತನಾಡಿ, ಸಂಸ್ಕೃತ ಭಾಷೆ ಭಾರತೀಯ ಜ್ಞಾನ ಪರಂಪರೆಗೆ ಪ್ರವೇಶದ್ವಾರ. ವಿದ್ಯಾರ್ಥಿಗಳು ಸಂಸ್ಕೃತಕ್ಕಾಗಿ ಶ್ರಮಿಸುವ ಪ್ರತಿಜ್ಞೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ೪೨ ವಿದ್ಯಾರ್ಥಿಗಳು ಸೇರಿ ೮೭ ಜನ ಭಾಗವಹಿಸಿದ್ದರು.
ಬೆಳಗಾವಿ ನಗರ ಸಂಯೋಜಕ ನಿಖಿಲ ಅಜರೇಕರ ಇತರರಿದ್ದರು.