ಕಲಬುರಗಿ: ಸಂಸ್ಕೃತ ಸನಾತನ ಭಾಷೆ. ಜಗತ್ತಿನ ಎಲ್ಲ ಭಾಷೆಗಳಿಗೂ ತಾಯಿ ಇದ್ದಂತೆ. ಜತೆಗೆ ಇದೊಂದು ವೈಜ್ಞಾನಿಕ ಭಾಷೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಕೃಷ್ಣ ಕಾಕಲವಾರ ಹೇಳಿದರು.
ನೂತನ ವಿದ್ಯಾಲಯ ಅನಂತರಾವ ದೇಶಮುಖ ಸಭಾಂಗಣದಲ್ಲಿ ಎನ್.ವಿ.ಸಂಸ್ಥೆ ಹಾಗೂ ಗಾಯತ್ರಿ ಸಂಸ್ಕೃತ ಪಾಠಶಾಲೆ ಸಹಯೋಗದಡಿ ಶನಿವಾರ ಆಯೋಜಿಸಿದ್ದ ಸಂಸ್ಕೃತ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವ ಭಾಷೆ ಎಂದು ಕರೆಸಿಕೊಳ್ಳುವ ಸಂಸ್ಕೃತ ವೈe್ಞÁನಿಕವಾಗಿದೆ. ಈ ಭಾಷೆ ಯಾವುದೇ ಒಂದು ಜಾತಿಗೆ ಸಿಮೀತವಲ್ಲ. ಸಂಸ್ಕೃತದ ಒಂದೊAದು ಶುಭಾಷಿತ ಜೀವನ ಮೌಲ್ಯ ಪರಿವರ್ತಿಸುವ ಶಕ್ತಿ ಹೊಂದಿದೆ ಎಂದರು.
ಸAಸ್ಕೃತ ಭಾಷೆ ಇಂದು ಕೇವಲ ಮಠ-ಮಾನ್ಯಗಳಿಗೆ ಸಿಮೀತವಾಗಿದೆ. ದೇಶದ ಎಲ್ಲ ಶಾಲಾ-ಕಾಲೇಜುಗಳಲ್ಲಿ ಇದನ್ನು ಕಡ್ಡಾಯಗೊಳಿಸಬೇಕು. ವಿe್ಞÁನ ಭಾರತೀಯ ಶ್ರೇಷ್ಠ ಪರಂಪರೆ. ವೇದ, ಉಪನಿಷತ್ತುಗಳು ವಿe್ಞÁನ ಆವಿಷ್ಕಾರದ ಬಗ್ಗೆ ಉ¯್ಲೆÃಖಿಸಿವೆ ಎಂದರು.
ವಲಯ ಸಂಯೋಜಕ ಮಲ್ಲನಗೌಡ ಪಾಟೀಲ್, ಎನ್‌ವಿ ಸಂಸ್ಥೆ ಅಧ್ಯP್ಷÀ ಡಾ.ಗೌತಮ ಜಹಾಗಿರದಾರ, ಭೀಮಸೇನರಾವ್ ದೇಶಪಾಂಡೆ, ಸುಧಾ ಕರಲಗಿಕರ್, ಡಾ.ಸದಾಶಿವ ಜಿಡಗೇಕರ್ ಇದ್ದರು.
ಪಂ.ಹಣಮAತಾಚಾರ್ಯ ಸರಡಗಿ ಪ್ರಾಸ್ತಾವಿಕ ಮಾತನಾಡಿ, ಸಂಸ್ಕೃತ ಮನುಷ್ಯರನ್ನು ಸಂಸ್ಕಾರವAತರನ್ನಾಗಿ ಮಾಡುತ್ತದೆ ಎಂದರು. ವಿದ್ಯಾರ್ಥಿನಿ ಅದಿತಿ ಅವಧಾನಿ ಪ್ರಾರ್ಥಿಸಿದಳು. ನಂತರ ವಿದ್ಯಾರ್ಥಿಗಳಿಂದ ಸಂಸ್ಕೃತ ಭಾಷೆಯಲ್ಲಿ ಭಾಷಣ, ಸಂಭಾಷಣೆ, ನಾಟಕ ಪ್ರದರ್ಶನಗೊಂಡವು.