??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಸಂಸ್ಕಾರದಿಂದ ಕಲೆಯ ಜನನ

ಜಯತೀರ್ಥ ಪಾಟೀಲ

ಭಾಲ್ಕಿ: ಕಲಾವಿದರಲ್ಲಿ ತಪಸ್ಸಿನ ಶಕ್ತಿ ಇದೆ. ದೇಹದ ಎಲ್ಲ ಅಂಗಾಂಗಳಿಗೆ ಸಂಸ್ಕಾರ ನೀಡಿದಾಗ ನಮ್ಲಲ್ಲಿರುವ ಕಲೆ ಹೊರ ಹೊಮ್ಮಲು ಸಾಧ್ಯ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ.ಶಂಭುಲಿಂಗ ಕಾಮಣ್ಣ ಅಭಿಪ್ರಾಯಪಟ್ಟರು.

ಪಟ್ಟಣದ ಕುಂಭೇಶ್ವರ ಗಜಾನನ ಮಂದಿರದಲ್ಲಿ ಆದಿಶಕ್ತಿ ಸಾಮಾಜಿಕ ಅಭಿವೃದ್ಧಿ ಮಹಿಳಾ ಮಂಡಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಕಲೆ ಇರುತ್ತದೆ, ಅದನ್ನು ಹೊರ ತರಲು ಶ್ರಮಿಸಬೇಕು. ಕಂಠಕ್ಕೆ ಸಂಸ್ಕಾರ ನೀಡಿದರೆ ಸಂಗೀತ, ಕಾಲಿಗೆ ಸಂಸ್ಕಾರ ನೀಡಿದರೆ ನೃತ್ಯ ಬರುತ್ತದೆ. ಎಲ್ಲ ಆವಯವಕ್ಕೆ ಸಂಸ್ಕಾರ ನೀಡಿದರೆ ಕಲಾವಿದರಾಗಬಹುದು ಎಂದರು.

ಜಾನಪದ ಪರಿಷತ್ ಮಹಿಳಾ ಘಟಕದ ತಾಲೂಕು ಅಧ್ಯಕ್ಷ ಆಶಾ ರಾಠೋಡ್ ಮಾತನಾಡಿ, ಸರ್ಕಾರ ಕಲಾವಿದರಿಗೆ ರಾಜಾಶ್ರಯ ನೀಡಬೇಕು. ಆಗ ಮಾತ್ರ ಕಲೆ ಉಳಿಯಲು ಸಾಧ್ಯ ಎಂದರು.

ಸುರೇಖಾ ಹೊಸಂಬ್ರೆ ಸಂಗಡಿಗರಿಂದ ಜಾನಪದ ಕೋಲಾಟ ಪ್ರದರ್ಶನ, ವಿಜಯಲಕ್ಷ್ಮೀ ಹಾರಕುಡೆ ಸಂಗಡಿಗರಿAದ ಜಾನಪದ ಹಾಡು ಮತ್ತು ನೃತ್ಯ ಪ್ರದರ್ಶಿಸಲಾಯಿತು. ಎಂ.ಪಿ.ರಾಠೋಡ್, ಕುಂಭೇಶ್ವರ ಮಂದಿರದ ಸಂಚಾಲಕ ರತ್ನದೀಪ ಶೇರಿಕಾರ್ ಮಾತನಾಡಿದರು. ನಿವೃತ್ತ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಪ್ರಮುಖರಾದ ವಿಜಯಕುಮಾರ ದೇಶಮುಖ, ಮಾಧವರಾವ ಹೊಳಸಂಬರೆ, ಸರಸ್ವತಿ ಹುಲಸೂರೆ, ಎಸ್.ಬೆಲ್ಲಾಳೆ ಇತರರಿದ್ದರು. ದೀಪಕ ಥಮಕೆ ನಿರೂಪಣೆ ಮಾಡಿದರು. ಆರ್.ಶೇರಿಕಾರ ವಂದಿಸಿದರು.