ಹಗರಿಬೊಮ್ಮನಹಳ್ಳಿ: ಗ್ರಾಮೀಣ ಭಾಗದಲ್ಲಿಯೇ ಕಲೆ, ಸಂಸ್ಕೃತಿ ಇನ್ನೂ ಜೀವಂತವಾಗಿ ಉಳಿದಿದೆ ಎಂದು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ವಿಜಯನಗರ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ ಹೇಳಿದರು.
ಹಂಪಾಪಟ್ಟಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಯುವಸೌರಭ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು. ವಿವಿಧ ಕಲೆಗಳನ್ನು ಉಳಿಸಿ ಬೆಳೆಸುವ ಹೊಣೆ ಸಮಾಜದ್ದಾಗಿದೆ. ಮೊಬೈಲ್ ಹಾವಳಿಯಿಂದ ಸಾಹಿತ್ಯ, ಸಂಸ್ಕಾರ, ಸಂಸ್ಕೃತಿಗಳನ್ನು ಯುವ ಜನತೆ ಮರೆಯುತ್ತಿದೆ, ಸರ್ಕಾರ ಗ್ರಾಮೀಣ ಪ್ರದೇಶದ ಸಂಸ್ಕೃತಿಯ ಬಗ್ಗೆ ಗಮನಹರಿಸಿ ಬೆಳಕು ಚೆಲ್ಲಬೇಕಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್ ಮಾತನಾಡಿ, ಜಾನಪದ ಕಲೆ ವೈವಿಧ್ಯಮಯ ಸಾಂಸ್ಕೃತಿಕ ಸೊಬಗನ್ನು ತೋರಿಸುತ್ತವೆ. ಮಕ್ಕಳಲ್ಲಿ ಜಾನಪದ ಕಲೆಗಳ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂದರು.
ರಾಜ್ಯ ರೈತ ಸಂಘದ (ವಾಸುದೇವ ಮೇಟಿ ಬಣ) ಜಿಲ್ಲಾ ಉಪಾಧ್ಯಕ್ಷ ಬಂಟರ ಕುಬೇರ, ಕಲಾವಿದ ಗೊಂದಲಿ ರಾಮಣ್ಣ, ತಾ.ಪಂ.ಮಾಜಿ ಸದಸ್ಯ ನಂದಿಬಂಡಿ ಸೋಮಣ್ಣ, ವಿಎಸ್‌ಎಸ್‌ಎನ್ ಸದಸ್ಯ ಖಾಜಾಸಾಬ್, ಹುಲುಗಪ್ಪ, ಮಾರುತಿ ಭಜನೆ ಮಂಡಳಿ ಅಧ್ಯಕ್ಷ ಮಾಲ್ವಿ ಕಿಟ್ಟಪ್ಪ, ಜಿ.ಶಿವಾನಂದ, ಗೊಂದಲಿ ಪಕೀರಪ್ಪ, ವಿ.ಹನುಮಂತ, ಕಿಟಗಿಹುಲುಗಪ್ಪ, ಉಪ್ಪಾರ ಕನಕಪ್ಪ, ಎಸ್.ಮಂಜುನಾಥ, ಅಂಬಳಿ ಈಶಪ್ಪ, ಜಿ.ಶ್ರೀನಿವಾಸ್ ಇದ್ದರು.