ಜಿಲ್ಲೆ

ಸಂಸದರ ವೈಯಕ್ತಿಕ ಟೀಕೆ ಸರಿಯಲ್ಲ

ಮೈಸೂರು: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರು ಸಂಸದ ಪ್ರತಾಪ್ ಸಿಂಹ ಕುರಿತು ವೈಯಕ್ತಿಕ ತೇಜೋವಧೆ ಮಾಡಿರುವುದು ಖಂಡನೀಯ ಎಂದು ಬಿಜೆಪಿ ನಗರ ಯುವ ಮೋರ್ಚಾದ ವಿ.ಸೋಮಸುಂದರ್ ಹೇಳಿದರು.

ಸಂಸದರು ಯಾರ ಮೇಲೆಯೂ ವೈಯಕ್ತಿಕವಾಗಿ ಹೇಳಿಕೆ ನೀಡಿಲ್ಲ. ಇದನ್ನು ಅರಿಯದೆ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣವನ್ನು ಬಳಸಿ ಸಂಸದರ ವಿರುದ್ಧ ಆಕ್ಷೇಪ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪುಷ್ಪಾ ಅಮರನಾಥ್ ಅವರು ತಮ್ಮ ಸಾಧನೆ ಏನಾದರೂ ಇದ್ದರೆ ಅದನ್ನು ವೈಭವೀಕರಿಸಿಕೊಳ್ಳಿ. ಅದನ್ನು ಬಿಟ್ಟು ನಿಮ್ಮ ಹುಳುಕು ಮುಚ್ಚಿಹಾಕಲು ಪ್ರಯತ್ನಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.