ಚಿತ್ತಾಪುರ: ನಿಮ್ಮೆಲ್ಲರ ಪ್ರೀತಿ, ಸಹಕಾರ ಹಾಗೂ ಬೆಂಬಲದಿAದ ಸಂಸದನಾಗಿ ಆಯ್ಕೆಯಾಗಿದ್ದೇನೆ. ಲೋಕಸಭೆಯಲ್ಲಿ ನಿಮ್ಮ ಹಾಗೂ ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಧ್ವನಿಯಾಗಿ ಕೆಲಸ ಮಾಡುವುದಾಗಿ ರಾಧಾಕೃಷ್ಣ ದೊಡ್ಡಮನಿ ಹೇಳಿದರು.
ಬಜಾಜ್ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಅವರು, ಪಕ್ಷಕ್ಕಾಗಿ ಶ್ರಮಿಸಿರುವುದನ್ನು ಗಮನದಲ್ಲಿಟ್ಟು ಕಾಂಗ್ರೆಸ್ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಿತು. ನೀವೆಲ್ಲರೂ ಹಗಲಿರುಳು ದುಡಿದು ನನ್ನನ್ನು ಗೆಲ್ಲಿಸಿದ್ದೀರಿ ಧನ್ಯವಾದ. ನಾನು ಸೇರಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ನಿಮ್ಮೆಲ್ಲರ ಸಹಕಾರ ಹೀಗೇ ಇರಲಿ ಎಂದು ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನನ್ನ ಧ್ಯೇಯ. ನಾನೇನು ಖಾಲಿ ಕೈಲಿ ಬಂದಿಲ್ಲ, ೬೩ ಕೋಟಿ ವೆಚ್ಚದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿz್ದÉÃನೆ. ಚುನಾವಣೆಯಲ್ಲಿ ಮಾತು ಕೊಟ್ಟಂತೆ ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ನಮ್ಮದು ಜನಪರ ಸರ್ಕಾರ ಎಂದರು.
ಜಿಲ್ಲೆಯ ೩೦ ಗ್ರಾಮಗಳ ಅಭಿವೃದ್ಧಿ ನೀಲಿನಕ್ಷೆ ರೂಪಿಸಲಾಗಿದೆ. ತಾಲೂಕಿನಲ್ಲಿ ಮೃಗಾಲಯ, ವಿಜ್ಞಾನ ಕೇಂದ್ರ ಸ್ಥಾಪನೆ ಗುರಿ ಹೊಂದಲಾಗಿದೆ. ಕಾಯಕ ಗ್ರಾಮ ಯೋಜನೆ ಜಾರಿ ಸಂಸದ ರಾಧಾಕೃಷ್ಣ ದೊಡ್ಡಮನಿ ಕನಸಾಗಿದ್ದು, ಯೋಜನೆಯಡಿ ಕನಿಷ್ಠ ೨ ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿ, ಪ್ರತಿಯೊಬ್ಬರಿಗೂ ನೆಮ್ಮದಿ ಜೀವನ ಕಲ್ಪಿಸುವುದು ಕಾಂಗ್ರೆಸ್ ಸಿದ್ಧಾಂತ. ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಡಾ.ಮಲ್ಲಿಕಾರ್ಜುನ ಖರ್ಗೆ ತೆರೆದಿದ್ದು, ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಮಾಜಿ ಸಚಿವ ರೇವುನಾಯಕ ಬೆಳಮಗಿ, ಶಾಸಕರಾದ ಎಂ.ವೈ. ಪಾಟೀಲ್, ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್ ಮಾತನಾಡಿದರು.
ಪ್ರಮುಖರಾದ ದೇವಿಂದ್ರಪ್ಪ ಮರತೂರ, ಚಂದ್ರಿಕಾ ಪರಮೇಶ್ವರ, ಭಾಗನಗೌಡ ಸಂಕನೂರ, ಶಂಭುಲಿAಗ ಗುಂಡಗುರ್ತಿ, ರಮೇಶ ಮರಗೋಳ, ಶಿವಾನಂದ ಪಾಟೀಲ್ ಮರತೂರ, ಅಜೀಜ್ ಸೇಠ, ಶ್ರೀನಿವಾಸ ಸಗರ, ಶಿವರುದ್ರ ಭೀಣಿ, ಬಸವರಾಜ ಪಾಟೀಲ್ ಹೇರೂರ, ಜಯಪ್ರಕಾಶ ಕಮಕನೂರ, ಮನ್ಸೂರ್ ಪಟೇಲ್ ತೊಂಚಿ, ಜಗಣ್ಣಗೌಡ ರಾಮತೀರ್ಥ, ಟೋಪಣ್ಣ ಕೋಮಟೆ, ಶಂಕರಯ್ಯಸ್ವಾಮಿ ಮದ್ರಿ, ಲತಾ ರಾಠೋಡ್, ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಸುನೀಲ್ ದೊಡ್ಡಮನಿ, ಮಲ್ಲಪ್ಪ ಹೊಸ್ಮನಿ ಇಂಗನಕಲ್, ಮಲ್ಲಿಕಾರ್ಜುನ ಕಾಳಗಿ, ಶಿವಕಾಂತ ಬೆಣ್ಣೂರಕರ, ಅರವಿಂದ ಚವ್ಹಾಣ್, ಸಂಜಯ ಬುಳಕರ್, ಸಪ್ನಾ ಪಾಟೀಲ್, ಮುಕ್ತಾರ್ ಪಟೇಲ್, ನಿಂಬಣ್ಣಗೌಡ, ರಾಜಶೇಖರ್ ತಿಮ್ಮನಾಕ್, ಮಲ್ಲಿಕಾರ್ಜುನ ಪೂಜಾರಿ, ರೇಣುಕಾ ಸಿಂಘೆ, ಮಲ್ಲಿಕಾರ್ಜುನ ಬೆಣ್ಣೂರಕರ ಇತರರಿದ್ದರು.
ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಪ್ರಾಸ್ತಾವಿಕ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಸ್ವಾಗತಿಸಿದರು. ಬಸವರಾಜ ಚಿನ್ನಮಳ್ಳಿ ನಿರೂಪಣೆ ಮಾಡಿದರು. ಶಾಂತಪ್ಪ ಚಾಳಿಕರ್ ವಂದಿಸಿದರು.