ಕಲಬುರಗಿ: ಸಂಶೋಧನೆಗಳು ಸ್ಥಳೀಯ, ಬೃಹತ್ ನಗರಗಳು ಎದುರಿಸುತ್ತಿರುವ ನಿತ್ಯ ಸವಾಲು, ಸಮಸ್ಯೆಗಳಿಗೆ ಪರಿಹಾರವಾಗಿ ಮೂಡಿರಲಿ. ನಗರ, ಕೃಷಿ, ನೀರು ಪೂರೈಕೆ, ಕಸ ನಿರ್ವಹಣೆ ಸೇರಿ ಮೂಲಭೂತ ಸೌಲಭ್ಯಗಳಿಗೆ ಸಂಶೋಧನೆಯಲ್ಲಿ ಆದ್ಯತೆ ದೊರೆಯಲಿ ಎಂದು ರಾಜ್ಯ ವಿಜ್ಞಾನ, ತಂತ್ರಜ್ಞಾನ ಪರಿಷತ್ ಕಾರ್ಯದರ್ಶಿ ಪ್ರೊ.ಅಶೋಕ ಎಂ.ರಾಯಚೂರ ಸಲಹೆ ನೀಡಿದರು.
ಶರಣಬಸವ ವಿಶ್ವವಿದ್ಯಾಲಯ, ರಾಜ್ಯ ವಿಜ್ಞಾನ, ತಂತ್ರಜ್ಞಾನ ಪರಿಷತ್, ಭಾರತೀಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ದೊಡ್ಡಪ್ಪ ಅಪ್ಪ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ೪೭ನೇ ಸರಣಿಯ ವಿದ್ಯಾರ್ಥಿ ಯೋಜನಾ ಕಾರ್ಯಕ್ರಮ, ರಾಜ್ಯ ಮಟ್ಟದ ಪೋಸ್ಟರ್ ಮತ್ತು ಯೋಜನೆ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸಂಶೋಧನೆಗಳು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು, ತ್ಯಾಜ್ಯ ನಿರ್ವಹಣೆಗೆ ಪರಿಹಾರ ಕಂಡುಕೊಳ್ಳಬೇಕು. ಸುಸ್ಥಿರ ಜೀವನಕ್ಕೆ ಪೂರಕವಾಗಿ ಇರಬೇಕು. ದೇಶದ ಪ್ರತಿಷ್ಠಿತ ವಿಜ್ಞಾನಿಗಳಾದ ಸಿಎನ್‌ಆರ್ ರಾವ್, ಸತೀಶ ದವನ್, ಹೋಮಿ ಜಹಾಂಗೀರ್ ಬಾಬಾ ಅವರ ಜೀವನ, ಸಾಧನೆ, ಸಂಶೋಧನೆಯ ಪುಸ್ತಕ ಓದಬೇಕು ಎಂದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಶರಣ ಸಂಸ್ಥಾನವೂ ಕಳೆದ ೨೫೦ ವರ್ಷದಿಂದ ಈ ಭಾಗದಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಸೇವೆ ನೀಡುತ್ತಿದೆ. ಇದೀಗ ಪೂಜ್ಯ ದೊಡ್ಡಪ್ಪ ಅಪ್ಪ, ಡಾ.ಶರಣಬಸವಪ್ಪ ಅಪ್ಪ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ. ಶಿಕ್ಷಣ, ತಂತ್ರಜ್ಞಾನ ಕ್ಷೇತ್ರದಲ್ಲಿ ಪೂರಕ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಶರಣಬಸವ ವಿವಿ ಕುಲಪತಿ ಡಾ.ಅನೀಲಕುಮಾರ ಬಿಡವೆ ಮಾತನಾಡಿ, ಸಂಶೋಧನೆಗಳು ಕೈಗಾರಿಕೆಗಳಲ್ಲಿ, ಮಾರ್ಕೆಟ್‌ನಲ್ಲಿ ಬಳಕೆಗೆ ಬರಬೇಕು. ಶರಣಬಸವ ಸಂಸ್ಥೆಯ ಇಂಜಿನಿಯರಿAಗ್ ಕಾಲೇಜುಗಳಲ್ಲಿ ೨೦೧೭ರಲ್ಲಿ ಪ್ರಾಜೆಕ್ಟ್ಗಳಿಗೆ ಆದ್ಯತೆ ನೀಡಿದ್ದು, ಇಡೀ ಇಂಜಿನಿಯರಿAಗ್ ಪೂರ್ಣಗೊಳಿಸುವ ಮುನ್ನ ಕನಿಷ್ಠ ಎಂಟು ಪ್ರೊಜೆಕ್ಟ್ ಮಾಡಲು ಸೂಚಿಸಿz್ದೆÃವೆ. ಇದು ಬದಲಾವಣೆಗೆ ಬಹುದೊಡ್ಡ ಪ್ರೇರಣೆ ನೀಡಿದೆ ಎಂದರು.
ಪರಿಷತ್ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಯು.ಟಿ.ವಿಜಯ ಮಾತನಾಡಿದರು. ವಿವಿ ನಿರ್ದೇಶಕ ಡಾ.ವಿ.ಡಿ.ಮೈತ್ರಿ, ಕುಲಸಚಿವ (ಮೌಲ್ಯಮಾಪನ) ಡಾ.ಎಸ್.ಎಚ್.ಹೊನ್ನಳ್ಳಿ, ಡೀನ್ ಡಾ.ಲಕ್ಷಿö್ಮÃ ಪಾಟೀಲ್ ಮಾಕಾ, ಹಣಕಾಸು ಅಧಿಕಾರಿ ಪ್ರೊ.ಕಿರಣ ಮಾಕಾ ಇತರರಿದ್ದರು. ಕುಲಸಚಿವ ಪ್ರೊ.ಎಸ್.ಜಿ.ಡೊಳ್ಳೆಗೌಡರ್ ಸ್ವಾಗತಿಸಿದರು. ವಿಶ್ವಜೀತ ಡರೆಕರ್ ವಂದಿಸಿದರು.