ಜಿಲ್ಲೆ

ಸಂಶೋಧನೆ ಪ್ರಗತಿಯತ್ತ ಸಾಗುವುದಾಗಿದೆ

ಬಾಗಲಕೊಟೆ: ಸಂಶೋಧನೆ ಗಂಭೀರವಾದ ಮಹತ್ವದ ಸಂಗತಿಯಾಗಿದ್ದು ಅದು ಪ್ರಗತಿಯತ್ತ ಸಾಗುವುದಾಗಿದೆ, ಭಾರತ ಅಭಿವೃದ್ಧಿ ಹೊಂದಿದ ರಾಷ್ಟçವಾಗಲು ಸಂಶೋಧನೆಗಳ ಅಗತ್ಯತೆ ಇದೆ ಎಂದು ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಗಣೀತ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ.ಸುನೀಲಕುಮಾರ ಹೊಸಮನಿ ಹೇಳಿದರು.

ಅವರು ಬಿ.ವಿ.ವಿ.ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ನಡೆದ “ಸಂಶೋಧನಾ ವಿಧಾನ” ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಸಂಪನ್ನೂಲವ್ಯಕ್ತಿಗಾಳಾಗಿ ಆಗಮಿಸಿ ಮಾತನಾಡಿದರು.

ಅವರು ರಸಾಯನಶಾಸ್ತ್ರ ಮತ್ತು ಬೌತಶಾಸ್ತçದ ಮೇಲಿನ ಗ್ರಾಪ್ ಸಿದ್ದಾಂತದ ಮಹತ್ವ ಮತ್ತು ಸಂಶೋಧನಾ ವಿಧಾನಗಳ ಬಗ್ಗೆ ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೇಸೆಯಿಂದಲೆ ಸಂಶೋಧನಾ ಪ್ರವೃತ್ತಿಗಳನ್ನು ಬೇಳೆಸಿಕೊಳ್ಳಬೇಕು, ಸಂಶೋಧನೆ ಮಾಡುವಾಗ ಉತ್ಕೃಷ್ಟ ದೇಶಗಳೋಡನೆ ಓಲಿಕೆಗಳನ್ನು ಮಾಡಿಕೊಳ್ಳಬೇಕು, ಅಮೇರಿಕಾ ಜಪಾನಗಳಲ್ಲಿ ವಿದ್ಯಾರ್ಥಿಗಳು ಸಂಶೋಧನಾ ಕ್ಷೇತ್ರದಲ್ಲಿ ಮುಂದುವರೆದಿದ್ದು, ಜೋತಗೆ ಭಾರತ ಸಂಶೋಧನಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ, ಭಾರತ ಮುಂದುವರೆದ ರಾಷ್ಟçವಾಗಲು ಸಂಶೋಧನೆಗಳ ಅಗತ್ಯವಿದೆ ಎಂದ ಅವರು ಸಂಶೋಧನಾ ಪ್ರಶ್ನೆ, ಸಮಸ್ಯೆ, ಹಿನ್ನೆಲೆ, ಅವಲೋಕನ, ಊಹೆಯನ್ನು ರೂಪಿಸುವ ಮತ್ತು ವಿನ್ಯಾಸ ಪ್ರಯೋಗ, ಪರೀಕ್ಷೆ, ಡೇಟಾ ಸಂಗ್ರಹಿಸಿ ಅವುಗಳ ಫಲಿತಾಂಶಗಳನ್ನು ಅರ್ಥೈಸಿ, ವಿಶ್ಲೇಷಿಸಿ ನಂತರ ಸಂಶೋಧನೆಗಳನ್ನು ಪ್ರಕಟಿಸುವುದು ಇವೆಲ್ಲವು ಸಂಶೋಧನಾ ವಿಧಾನಗಳಾಗಿವೆ, ಅಧ್ಯಯನಕ್ಕೆ ಆಧಾರವಾಗಿರುವ ತಾರ್ಕಿಕತೆ ಮತ್ತು ತಾತ್ವಿಕ ಊಹೆಗಳ ಬಗ್ಗೆ ಅರಿವು ಅಗತ್ಯ, ಒಂದು ನಿರ್ದಿಷ್ಟ ಕಾರ್ಯವನ್ನು ಪೂರ್ಣಗೊಳಿಸಲು ನಿರ್ದಿಷ್ಟ ಉದ್ದೇಶವನ್ನು ತಲುಪಲು ತೆಗೆದುಕೊಂಡ ಕ್ರಮಗಳ ವ್ಯವಸ್ಥಿತ, ಕ್ರೋಡೀಕೃತ ಸರಣಿಯೆ ಸಂಶೋಧನೆಯ ವಿಧಾನವಾಗಿದೆ ಎಂದರು.

ಇನ್ನೋರ್ವ ಸಂಪನ್ನೂಲ ವ್ಯಕ್ತಿಗಳಾದ ಬಸವೇಶ್ವರ ಇಂಜಿನಿಯರಿಂಗ್ ಮಹಾವಿದ್ಯಾಲಯದ ಗ್ರಂಥಪಾಲಕರಾದ ಡಾ. ಶ್ರೀಕಾಂತ ಕಾರ್ಕೂನ ಅವರು ಶೈಕ್ಷಣಿಕ ಸಮಗ್ರತೆಗಾಗಿ ಕೌಶಲ್ಯಗಲು ಮತ್ತು ಸಂಶೋಧನಾ ವಿಧಾನಗಳ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಎಸ್.ಎಂ.ಗಾಂವಕರ್ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿಯನ್ನು ಬೇಳಸಿ, ವಿದ್ಯಾರ್ಥಿಗಳನ್ನು ಜ್ಞಾನಸಮೃದ್ಧಿಯನ್ನಾಗಿ ಮಾಡುವ ಉದ್ದೇಶದಿಂದ ಇಂತಹ ಅನೇಕ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಇಂದಿನ ಕಾರ್ಯಾಗಾರ ಸದುಪಯೋಗವನ್ನು ವಿದ್ಯಾರ್ಥಿಗಳು ತಗೆದುಕೊಂಡು ತಮ್ಮ ಸಂಶೋಧನಾ ಜ್ಞಾನವನ್ನು ಹೆಚ್ಚಿಸಿಕೊಳ್ಳಿ ಎಂದರು
ಕಾರ್ಯಕ್ರಮದಲ್ಲಿ ವಿವಿಧ ಮಹಾವಿದ್ಯಾಲಯಗಳ ಶಿಕ್ಷಕ ವೃಂದ ಹಾಗು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮ ಸಂಯೋಜಕಿ ಡಾ. ಎಸ್.ಆರ. ಕಲಾದಗಿ ಸ್ವಾಗತಿಸಿದರು, ಐಕ್ಯೂಎಸಿ ಸಂಯೋಜಕ ಡಾ.ಡಿ.ಎಸ್.ಲಮಾಣಿ ಪರಿಚಯಿಸಿದರು, ವಿದ್ಯಾರ್ಥಿನಿ ಸಹನಾ ಕುಲಕರ್ಣಿ ಪ್ರಾರ್ಥಿಸಿದರು, ಡಾ.ಮಾದವರಾವ್ ಕುಲಕರ್ಣಿ ವಂದಿಸಿದರು.