ಬಾಗಲಕೋಟೆ: ಸ್ವಾಮಿ ವಿವೇಕಾನಂದರ ತ್ಯಾಗ ಮತ್ತು ಸಾಧನೆ ಯುವಕರಿಗೆ ಆಧರ್ಶವಾಗಿದ್ದು ಇಂದಿನ ಯುವ ಶಕ್ತಿಗೆ ಸಂಶೋಧನಾತ್ಮಕ ಜ್ಞಾನದ ಹಸಿವು ಮುಖ್ಯವಾಗಬೇಕು ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ವಿದ್ಯಾಗಿರಿಯಲ್ಲಿನ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ನೂತನ ಸಭಾ ಭವನದಲ್ಲಿ ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ,ನೆಹರು ಯುವ ಕೇಂದ್ರ ಬಾಗಲಕೋಟೆ,ಬಸವವೇಶ್ವರ ಇಂಜಿನಿಯರಿಂಗ್ ಕಾಲೇಜು ವಿದ್ಯಾಗಿರಿ,ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಯೋಗದಲ್ಲಿ ನಡೆದ ಸ್ವಾಮಿ ವಿವೇಕಾನಂದರ ೧೬೧ ನೇ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ಭಾರತದ ಧಾರ್ಮಿಕತೆಯ ಅಸ್ಮೀತೆಯ ಪ್ರತಿಕ, ಅವರು ಕಡಿಮೆ ವಯಸ್ಸಿನಲ್ಲಿಯೆ ಜಗಮೇಚ್ಚುವ ಸಾಧನೆ ಮಾಡಿ ಪ್ರಪಂಚದಲ್ಲಿ ಇಂದಿಗೂ ಜೀವಂತವಾಗಿರುವುದು ಜ್ಞಾನದ ಮೇರುಪರ್ವತವನ್ನು ತೋರಿಸುತ್ತದೆ, ರಾಮಕೃಷ್ಣ ಪರಮಹಂಸರ ಶಿಷ್ಯರಾಗಿ ಬೇಳೆದ ಪರಿ ಗುರುಶಿಷ್ಯ ಪರಂಪರೆಗೆ ಆದರ್ಶವಾಗಿದೆ.
ಭಾರತದ ಯುವ ಜನತೆಗೆ ಅವರ ತ್ಯಾಗ ಮತ್ತು ಸಾಧನೆ ಆದರ್ಶವಾಗಿದ್ದು, ಯುವ ಜನಾಂಗ ಸಂಶೋಧನಾತ್ಮಕ ಜ್ಞಾನ ಹಸಿವನ್ನು ಮೈಗೂಡಿಸಿಕೋಳ್ಳಬೇಕು, ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಂತೆ ಮುಂದಿನ ದಿನಗಳಲ್ಲಿ ಭಾರತ ವಿಶ್ವದ ಆರ್ಥಿಕತೆಯ ಪಟ್ಟಿಯಲ್ಲಿ ೩ ನೇ ಸ್ಥಾನಕ್ಕೆರುವುದಿದೆ, ಅಲ್ಲದೆ ಭಾರತ ಧಾರ್ಮಿಕ, ಸಾಂಸ್ಕೃತಿಕವಾಗಿ ಜಗತ್ತಿಗೆ ಶ್ರೀಮಂತವಾಗಿದ್ದು ಭಾರವನ್ನು ಜಗದ್ಗುರುವನ್ನಾಗಿಸಲು ಎಲ್ಲರೂ ಕಾರ್ಯಮಗ್ನರಾಗೋಣ ಎಂದರು.
ಯುವ ಸಬಲೀಕರಣದ ಹಾಗೂ ಕ್ರೀಡಾ ಇಲಾಖೆಯ ಸಹ ನಿರ್ದೇಶಕ ಗುರುಪಾದ ಡೂಗನ್ನವರ ಮಾತನಾಡಿ ದೇಶದ ಅಭಿವೃದ್ಧಿಯಲ್ಲಿ ಯುವ ಜನತೆಯ ಪಾತ್ರ ಮುಖ್ಯವಾಗಿದ್ದು, ನಮ್ಮನ್ನು ನಾವು ಸ್ವಯಂ ಪ್ರೇರಣೆಯಿಂದ ದೇಶದ ಪ್ರಗತಿಯಲ್ಲಿ ತೊಡಗಿಸಿಕೊಳುಲು ಸಲಹೆ ನಿಡಿದರು. ಇದೆ ಸಂಧರ್ಭದಲ್ಲಿ ಅಪಘಾತ ತಡ ಕುರಿತು ಡಾ.ಅಶ್ವಿನಿ ಪಾಟೀಲ ಉಪನ್ಯಾಸ ನೀಡಿದರು.
ಪ್ರಸ್ತಾವಿಕವಾಗಿ ನೇಹರು ಯುವ ಕೇಂದ್ರ ಲೆಕ್ಕ ಹಾಗೂ ಕಾರ್ಯಕ್ರಮ ಅಧಿಕಾರಿ ಆರ್.ಎ.ಬಿರಾದಾರ ಮಾತನಾಡಿ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟೀಯ ದಿನ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ನೀಡುವ ಸಂದೇಶವನ್ನು ಪ್ರತಿ ಜಿಲ್ಲೆಯಲ್ಲಿ ೨೦೦೦ ವಿದ್ಯಾರ್ಥಿಗಳು ವಿಕ್ಷಸಿಸು ವ್ಯೆವಸ್ಥೆ ಮಾಡಲಾಗಿದೆ ಎಂದರು.
ಇಂಜಿನಿಯರಿಂಗ್ ಕಾಲೇಜಿ ಪ್ರಾಚಾರ್ಯ ಡಾ.ಜಿ.ಎಸ್.ಜಂಗಮಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಎನ್.ಎಸ್.ಎಸ್. ನೂಡಲ್ ಅಧಿಕಾರಿ ಎಮ್.ಎ.ಪಾಟೋಳಿ ಇದ್ದರು.