ಬೆಳಗಾವಿ: ಸಂಶೋಧಕ ತನ್ನ ವಿಷಯ ಪ್ರತಿಪಾದನೆಗೆ ಕೇವಲ ಶಿಷ್ಟ ದಾಖಲೆಗಳನ್ನು ಅವಲಂಬಿಸುವುದು ಅಪಾಯಕಾರಿ. ಜಾನಪದ, ಐತಿಹ್ಯ ಮುಂತಾದವುಗಳನ್ನು ಬಳಸಿಕೊಂಡು ಆಳವಾದ ತುಲನಾತ್ಮಕ ಅಧ್ಯಯನ ಮಾಡಿ ವಿಷಯ ಮಂಡಿಸಬೇಕು ಎಂದು ಸಾಹಿತಿ ಡಾ.ಬಾಳಣ್ಣ ಶೀಗೀಹಳ್ಳಿ ಹೇಳಿದರು.
ನಗರದ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎ.ಸನದಿ ಸಾಂಸತಿಕ ಪ್ರತಿಷ್ಠಾನ ಆಯೋಜಿಸಿದ್ದ "ಪ್ರೊ. ಜ್ಯೋತಿ ಹೊಸೂರ: ನೆನಪು&ನಮನ' ಸಮಾರಂಭದಲ್ಲಿ ಸಂಶೋಧನಾ ೇತ್ರಕ್ಕೆ ಪ್ರೊ. ಹೊಸೂರ ಅವರ ಕೊಡುಗೆ' ವಿಷಯ ಕುರಿತು ಅವರು ಮಾತನಾಡಿದರು.
ಸ್ಥಳಿಯ ಇತಿಹಾಸ, ಸಂಸತಿಗಳ ಪ್ರೆಯಿಲ್ಲದೆ ವಿಷಯ ಪ್ರತಿಪಾದಿಸುವದರಿಂದ ನಾವು ಅಪೂರ್ವ ಸಾಂಸತಿಕ ಸಂಪತ್ತನ್ನೇ ಕಳೆದುಕೊಳ್ಳಬೇಕಾಗುತ್ತದೆ. ಕಾರಣ ಸಂಶೋಧಕ ಸಣ್ಣ&ಪುಟ್ಟ ಸ್ಥಳಿಯ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ಸತ್ಯದರ್ಶನ ಮಾಡಿಸಬೇಕು. ಅವುಗಳನ್ನೆಲ್ಲ ತಮ್ಮ ಸಂಶೋಧನೆಗಳಲ್ಲಿ ಅಳವಡಿಸಿಕೊಂಡ ಹೊಸೂರ ಅವರು ಅದ್ವೀತಿಯ ಸಂಶೋಧಕರಾಗಿದ್ದರು ಎಂದರು.
ಡಾ. ಪಿ.ಜಿ. ಕೆಂಪಣ್ಣವರ "ಜಾನಪದ ಸಾಹಿತ್ಯಕ್ಕೆ ಪ್ರೊ. ಹೊಸೂರರ ಕೊಡುಗೆ' ಕುರಿತು ಮಾತನಾಡಿ, ಅಪೂರ್ವ ಜಾನಪದ ಸಾಹಿತ್ನ ಬೆಳೆಸಿದ ಶ್ರೇಯಸ್ಸು ಹೊಸೂರ ಅವರಿಗೆ ಸಲ್ಲಬೇಕು. ಜಾನಪದ ಹಾಡುಗಳನ್ನು ಅವುಗಳ ಮೂಲ ಸೊಗಡನ್ನು ವಸ್ತುನಿಷ್ಠವಾಗಿ, ಶಾಸೊಕ್ತವಾಗಿ ಸಂಗ್ರಹಿಸುವ ಕೆಲಸ ಮಾಡಿದವರೆಲ್ಲ ಶಾಸಿಯವಾಗಿ ಅಧ್ಯಯನ ಮಾಡಿ, ಜಾನಪದ ೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಶ್ಲಾಸಿದರು.
ಅಧ್ಯಕ್ಷತೆ ವಹಿಸಿದ್ದ ಎಲ್.ಎಸ್. ಶಾಸಿ ಮಾತನಾಡಿ ರ್ನಿಭೀತ, ಸ್ಪಷ್ಟ, ನೇರವಾದಿಯಾದ ಚಿಂತಕ ಪ್ರೊ. ಹೊಸೂರ ಅವರು ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದರು. ಇವರ ವೈಚಾರಿಕ ಬರಹಗಳ ಪ್ರಚಾರ&ಪ್ರಸಾರ ಜಿಲ್ಲಾದ್ಯಂತ ನಡೆಯಬೇಕು ಎಂದರು. ಡಾ. ಆನಂದ ಹೊಸೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಎ. ಸನದಿ ಸ್ವಾಗತಿಸಿದರು. ಬಸವರಾಜ ಗಾರ್ಗಿ ನಿರೂಪಿಸಿದರು. ಸಿ.ಎಂ.ಬೂದಿಹಾಳ ವಂದಿಸಿದರು.
ಪ್ರೊ. ಎಲ್.ವಿ. ಪಾಟೀಲ, ಡಾ. ಬಿ.ಜಿ. ಧಾರವಾಡ, ಎಂ.ವೈ. ಮೆಣಸಿನಕಾಯಿ, ಹಮೀದಾ ದೇಸಾಯಿ, ಪ್ರೊ. ಕಲ್ಲಣ್ಣವರ, ಎಂ.ಎ.ಪಾಟೀಲ, ಕಿರಣ ನೇಸರಿ, ಡಾ. ಎಚ್.ಬಿ. ಕೋಲಕಾರ, ಅಕಬರ ಸನದಿ ಇತರರಿದ್ದರು.