ಕೊಳ್ಳೇಗಾಲ: ಸಂವಿಧಾನ ಭಾರತದ ಎಲ್ಲ ವರ್ಗದ ಹಾಗೂ ಧರ್ಮದ ಜನರಿಗೆ ಸಮಾನ ಅವಕಾಶ ನೀಡಿದೆ ಎಂದು ದಲಿತ ಹಾಗೂ ಅಲ್ಪಸಂಖ್ಯಾತರ ಸೇನೆ ರಾಜ್ಯಾಧ್ಯಕ್ಷ ಎ.ಜೆ ಖಾನ್ ಹೇಳಿದರು.
ಪಟ್ಟಣದ ನ್ಯಾಷನಲ್ ಶಾಲಾ ಆವರಣದಲ್ಲಿ ಬುಧವಾರ ಸಂಜೆ ತಾಲೂಕು ಮುಸ್ಲಿಂ ಸಮುದಾಯದಿಂದ ಆಯೋಜಿಸಿದ್ದ 75ನೇ ಸಂವಿಧಾನ ಜನಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಡಾ.ಬಿ.ಆರ್ ಅಂಬೇಡ್ಕರ್ ಬದುಕು-ಬರಹಗಳನ್ನು ಪ್ರತಿಯೊಬ್ಬರೂ ಓದಿ ತಿಳಿದುಕೊಳ್ಳಬೇಕು. ಸಂವಿಧಾನದ ಅರಿವಿಲ್ಲದಿದ್ದರೆ ಜೀವನ ಕಷ್ಟವಾಗುತ್ತದೆ ಎಂದರು.
ವಿಚಾರವಾದಿ ರಂಗಸ್ವಾಮಿ ಮಾತನಾಡಿ, ಸಂವಿಧಾನ ಪೀಠಿಕೆಯ ಸಾರಾಂಶದಂತೆ ಬದುಕಿದರೆ ದೇಶದಲ್ಲಿ ಸಹಬಾಳ್ವೆ ನೆಲೆಸುತ್ತದೆ ಎಂದರು.
ಮುಸ್ಲಿಂ ಸಮುದಾಯದ ಗುರುಗಳಾದ ಅಂಜದ್ ಖಾನ್, ಕ್ರೈಸ್ತ ಗುರು ಜೋಶುವಾ ಪ್ರಸನ್ನ ಕುಮಾರ್, ಐಐಟಿ ಕಾಲೇಜು ಪ್ರೋ. ಕಲೀಂ ಉಲ್ಲಾ ಖಾನ್, ಮಹದೇವ ಕುಮಾರ್, ಮತ್ತೀನ್, ಏಜಾಜ್, ಆಸೀಫ್, ಇನಾಯತ್, ನಾಜೀಮ್, ಇರ್ಫಾನ್ ಇತರರು ಇದ್ದರು.