ಚಿತ್ರದುರ್ಗ: ಪಹಲ್ಗಾಮ್‌ಉಗ್ರರ ಗುಂಡಿನ ದಾಳಿ ಕೃತ್ಯವನ್ನು ದೇಶದ ಪ್ರತಿಯೊಬ್ಬರು ಖಂಡಿಸಬೇಕೆಂದು ವಕೀಲ ಬಿ.ಕೆ.ರಹಮತ್‌ವುಲ್ಲಾ ಹೇಳಿದ ರು. ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಏ ರ್ಪಡಿಸಿದ್ದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು,ಎಲ್ಲರೂ ಏಕತೆ ಯಿಂದ ಬದುಕುತ್ತಿರುವ ಭಾರತದಲ್ಲಿ ಶಾಂತಿ ಕದಡಲು ಅವಕಾಶವಿಲ್ಲ.
ದೇಶಕ್ಕೆ ಭದ್ರ ಸಂವಿಧಾನ ನೀಡಿರುವ ಅಂಬೇಡ್ಕರ್ ಅವರಲ್ಲಿ ದಲಿತನಾಗಿ ಹುಟ್ಟಿರುವುದೇ ತಪ್ಪಾ ಎನ್ನುವ ಕೊರಗಿತ್ತು. ಈಗಲೂ ಹಲ ವು ದೇವಾಲಯಗಳಲ್ಲಿ ದಲಿತರಿಗೆ ಪ್ರವೇಶವಿಲ್ಲ. ದಲಿತರ ಕಷ್ಟ ಏನೇನ್ನುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಎಲ್ಲ ಜಾತಿ,ಧರ್ಮದವರಿಗೂ ಸಂವಿಧಾನದಲ್ಲಿ ಸಮಾನತೆಯಿದೆ. ಕೊಳಗೇರಿ ನಿವಾಸಿಗಳು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸ. ಬೇಕು. ಸಂವಿಧಾನವನ್ನು ಎಲ್ಲರೂ ಅರಿಯಬೇಕೆಂದರು.
ಲೋಕಾಯುಕ್ತ ಸರ್ಕಾರಿ ಅಭಿಯೋಜಕ ಮಲ್ಲೇಶಪ್ಪ ಮಾತನಾಡಿ ಶಿಕ್ಷಣ,ಸಂಘಟನೆ,ಹೋರಾಟ ಅಂಬೇಡ್ಕರ್ ಅವರ ಮೂಲ ಧ್ಯೇ ಯವಾಗಿತ್ತು. ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ ಇದೆ. ಮಹಾನ್ ಮಾನವತಾವಾದಿಯಾಗಿದ್ದ ಅಂಬೇಡ್ಕರ್ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಿದಾಗ ಸಂವಿಧಾನದ ಆಶಯ ಈಡೇರಲಿದೆ ಎಂದು ತಿಳಿಸಿದರು. ವಕೀಲ ಒ.ಪ್ರತಾಪ್‌ಜೋಗಿ ಮಾತನಾಡಿ,ದೇಶ- ವಿ ದೇಶಗಳಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ಅಂಬೇಡ್ಕರ್,ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದರು ದೇಶದ ಮೊದಲ ಕಾನೂನು ಮಂತ್ರಿಯಾಗಿದ್ದರು. ಮಹಿಳಾ ಸಮಾನತೆಗೆ ಆದ್ಯತೆ ಕೊಟ್ಟಿದ್ದರು. ವಿಶ್ವವೇ ನಮ್ಮ ಸಂವಿಧಾನವನ್ನು ಒಪ್ಪಿಕೊಂಡಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕಿದೆ.ಮ ಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂದು ಕೊಳಗೇರಿ ನಿವಾಸಿಗಳಿಗೆ ಸಲಹೆ ನೀಡಿದರು. ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್,ಉಪಾಧ್ಯಕ್ಷ ರಂಗಸ್ವಾಮಿ ಇದ್ದರು.