ಜಿಲ್ಲೆ

ಸಂವಿಧಾನದ ಮರ್ಯಾದೆ ಉಳಿಸಿ

ಹುನಗುಂದ: ಉತ್ತರ ಪ್ರದೇಶದ ಹಾಥರಸ್‌ನಲ್ಲಿ ನಡೆದ ಅತ್ಯಾಚಾರ ಘಟನೆ ಖಂಡಿಸಿ ಕರವೇ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟಿನೆ ನಡೆಸಿ ತಹಸೀಲ್ದಾರ್ ಬಸವರಾಜ ನಾಗರಾಳ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ರಂಜಾನ ನದ್ಾ, ತಾಲೂಕು ಕರವೇ ಅಧ್ಯಕ್ಷ ವೀರಣ್ಣ ಬಡಿಗೇರ ಮಾತನಾಡಿ, ದುಷ್ಕರ್ಮಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿ ಸಂವಿಧಾನದ ಮರ್ಯಾದೆಯನ್ನು ಉಳಿಸಬೇಕು ಎಂದರು.
ಸಲೀಮ ಹತ್ತಿರಕಾಳ, ಶರಣಪ್ಪ ಗಾಣಿಗೇರ, ಶರಣು ಕುರಿ, ಈರಣ್ಣ ಗಣಾಚಾರಿ, ಸಂಗಮೇಶ ಮೊಕಾಶಿ, ಮೌಲಪ್ಪ ಮಾದರ, ರಾಜೇಸಾಬ ಮುಲ್ಲಾ, ಸದ್ದಾಂ ಮುಲ್ಲಾ ಇತರರಿದ್ದರು.