ಯಾದಗಿರಿ: ದೇಶದ ಗ್ರಂಥ ಎಂದರೆ ನಮ್ಮ ಸಂವಿಧಾನ, ಅದರ ಅಡಿಯಲ್ಲಿ ಬರುವ ಕಾನೂನಿನ ಕುರಿತು ತಿಳುವಳಿಕೆ, ಅನುಭೋಗಗಳ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹಿರಿಯ ಸಿವಿಲ್ ನ್ಯಾಯಾಶ ರವೀಂದ್ರ ಎಲ್.ಹೊನೋಲೆ ಅಭಿಪ್ರಾಯಪಟ್ಟರು.
ತಾಲೂಕಿನ ಸೈದಾಪುರ ಪಟ್ಟಣದ ಮಲ್ಲಾರ್ ಕರೆಡ್ಡಿ ಬಸವಂತರಾಯ ಸಿದ್ದಪ್ಪ ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವಾ ಪ್ರಾಕಾರ, ಜಿಲ್ಲಾ ವಕೀಲರ ಸಂಘ, ಪೊಲೀಸ್, ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಬಾಲ್ಯ ವಿವಾಹ ನಿಮರ್ೂಲನೆ ಕುರಿತ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 6ರಿಂದ 14 ವರ್ಷದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕು ಇದೆ. ಇತ್ತೀಚಿನ ದಿನಗಳಲ್ಲಿ ಬಾಲ್ಯ ವಿವಾಹ ಹೆಚ್ಚಾಗಿ ಕಂಡು ಬರುತ್ತಿವೆ. ಅದಕ್ಕಾಗಿ ಮಕ್ಕಳಿಗೆ ಕಾನೂನಿನ ಅರಿವು ಮುಖ್ಯವಾಗಿದೆ. ಸಂವಿಧಾನ ಅನುಚ್ಛೇದ 21ರ ಕುರಿತು ವಿವರವಾಗಿ ಮಕ್ಕಳಿಗೆ ತಿಳಿಸಿದ ಅವರು, ಬಾಲ ಕಾಮರ್ಿಕ ನಿಮರ್ೂಲನ ಪದ್ದತಿಯನ್ನು ಹೋಗಲಾಡಿಸುವಲ್ಲಿ ಎಲ್ಲರೂ ಶ್ರಮ ಪಡಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಕಾರಿ ಮಲ್ಲಿಕಾಜರ್ುನ ಪೂಜಾರಿ ಮಾತನಾಡಿ, ಸಕರ್ಾರ ಎಲ್ಲ ಮಕ್ಕಳಿಗೂ ಮೂಲಭೂತ ಸೌಕರ್ಯ ಒದಗಿಸಿದೆ. ಪಾಲಕರು ಈ ಸೌಲಭ್ಯ ಬಳಸಿಕೊಂಡು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು ಎಂದರು.
ಶಿಶು ಅಭಿವೃದ್ಧಿ ಯೋಜನಾಕಾರಿ ಲಾಲ್ಸಾಬ, ಪಿಎಸ್ಐ ಕಾಳಪ್ಪ ಬಡಿಗೇರ್, ರಿಯಾಜ್ ಪಟೇಲ್ ವರ್ಕನಳ್ಳಿ, ಸಂಸ್ಥೆ ಅಧ್ಯಕ್ಷ ಸಿದ್ರಾಮಪ್ಪಗೌಡ ಪಾಟೀಲ್, ವಕೀಲರಾದ ಬಸವರಾಜ ಪಾಟೀಲ್ ಕ್ಯಾತ್ನಾಳ, ಆರ್.ಎಸ್. ಪಾಟೀಲ್, ಅನಂತ್ ರೆಡ್ಡಿ, ಮಲ್ಲಿಕಾಜರ್ುನ ಮನಗನಾಳ, ಬಸವರಾಜ ಇದ್ದರು.