ಜಿಲ್ಲೆ

ಸಂವಿಧಾನದ ಪರ ಜನರ ತೀರ್ಪು

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ಹೆಚ್ಚಿನ ಶಿಕ್ಷಣ ಪಡೆದವರು ಮನುವಾದಿ, ಜಾತಿವಾದಿಗಳ ಪರವಾಗಿದ್ದಾರೆ? ಸಂವಿಧಾನದ ಪರವಾಗಿ ಇರಬೇಕಾದವರು ಎತ್ತ ಸಾಗುತ್ತಿದ್ದಾರೆ ಎಂಬುದರ ಕುರಿತು ಚರ್ಚೆಗಳಾಗಬೇಕಿದೆ ಎಂದು ರಾಜ್ಯ ಸಾಮಾಜಿಕ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ ಹೇಳಿದರು.

ಜಿಲ್ಲಾ ಸಾಮಾಜಿಕ ಸಂಘರ್ಷ ಸಮಿತಿ ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಸರ್ಕಾರದ ರಚನೆ-ಅಹಿಂದ ಸಮುದಾಯದ ಪಾತ್ರ ಹಾಗೂ ವಿಧಾನಸಭಾ ಚುನಾವಣೆ ಫಲಿತಾಂಶ-ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ಸಂವಿಧಾನ ಪರ ಇದ್ದೇವೆ ಎಂಬುದನ್ನು ರಾಜ್ಯದ ಜನತೆ ವಿಧಾನಸಭಾ ಚುನಾವಣೆ ಫಲಿತಾಂಶದ ಮೂಲಕ ದೃಢಪಡಿಸಿದ್ದಾರೆ ಎಂದ ಅವರು, ಯುವ

ಪೀಳಿಗೆಗೆ ಸಂವಿಧಾನ ಪರ ನಿಲ್ಲುವಂಥ ಶಿಕ್ಷಣವನ್ನು ಕೊಡಬೇಕಿದೆ. ಪ್ರಸ್ತುತ ಮನುವಾದದ ಪರವಿರುವ ಶಿಕ್ಷಣವನ್ನು ಕೊಡಲಾಗುತ್ತಿದೆಯೇ ಎಂಬುದರ ಕುರಿತು ಚರ್ಚೆ ಆಗಬೇಕಿದೆ ಎಂದರು.

ಹೆಚ್ಚು ಓದಿದವರಲ್ಲಿ ಶೇ.70 ಜನರು ಮನುವಾದಿಗಳಿಗೆ ಮತ ಹಾಕುವ ಮೂಲಕ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಕತ್ತು ಹಿಸುಕುವ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಜಾಸ್ತಿಯಾಗಿದೆ ಎನ್ನುವವರು ಕೂಡ ಬಿಜೆಪಿ ಪರವಿದ್ದಾರೆ ಎಂದು ಬೇಸರಿಸಿದರು.
ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಒಗ್ಗೂಡಿಕೆಯಿಂದ ರಾಜ್ಯದಲ್ಲಿ ಸಂವಿಧಾನ ವಿರೋಧಿ ಪಕ್ಷಕ್ಕೆ ಸೋಲಾಗಿದ್ದು ಈ ಮೂಲಕ ಕಾಂಗ್ರೆಸ್ ಗೆದ್ದಿದೆ ಎಂದರು.
ಲೇಖಕ ಎಚ್.ಆನಂದಕುಮಾರ್, ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ಅಧ್ಯಕ್ಷ ಟಿಪ್ಪುಖಾಸಿಂ ಆಲಿ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಪಾಪಯ್ಯ, ಮುಖಂಡರಾದ ಬಿ.ರಾಜಪ್ಪ, ದಾವಣಗೆರೆ ಇಮ್ತಿಯಾಜ್ ಹುಸೇನ್, ಲಕ್ಷ್ಮೀಕಾಂತ್, ಕೆ.ಕುಮಾರ್, ಉಪನ್ಯಾಸಕ ಸಂಜೀವ್‌ಕುಮಾರ್ ಪೋತೆ, ಡಾ.ಕುಮಾರ್ ಕಸವನಹಳ್ಳಿ, ತಾಪಂ ಮಾಜಿ ಸದಸ್ಯ ಎಂ.ಡಿ.ರವಿ, ಸಿ.ರಾಮು ಮಾತನಾಡಿದರು.

ಮಗ್‌ಶಾಟ್ (ಸಿ.ಕೆ.ಮಹೇಶ್)

ಕೋಟ್
ದೇಶಕ್ಕೆ ಅಂಬೇಡ್ಕರ್ ಬಲಿಷ್ಠವಾದ ಸಂವಿಧಾನವನ್ನು ಕೊಟ್ಟಿದ್ದಾರೆ. ಅಂಬೇಡ್ಕರ್ ತತ್ವ, ಸಿದ್ಧಾಂತ, ಆಶಯಗಳೆಡೆ ಅರಿವಿಲ್ಲದೆ ಇರುವುದು, ಶೋಷಿತ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಮನುವಾದಿ ಸಂಘಟನೆಗಳನ್ನು ಬೆಂಬಲಿಸುತ್ತಿರುವುದಕ್ಕೆ ಪ್ರಮುಖ ಕಾರಣ.
ಡಾ.ವಿ.ಬಸವರಾಜ್ ರಂಗಕರ್ಮಿ

ಫೋಟೋ ಸರಿಯಿಲ್ಲ (ಸಿಟಿಡಿ 2 ಸಂವಾದ)