ಮೈಸೂರು: ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ‘ಸಂವಿಧಾನದ ನೆರಳಲ್ಲಿ’ (ಸಾಮಾಜಿಕ-ರಾಜಕೀಯ ಬರಹಗಳು) ಪುಸ್ತಕ ಬಿಡುಗಡೆ ಕಾರ್ಯಕ್ರಮ ಜು.22ರಂದು ಬೆಳಗ್ಗೆ 10.30ಕ್ಕೆ ನಗರದ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.
ಸಂಗೀತ ನಿರ್ದೇಶಕ ಡಾ.ಹಂಸಲೇಖ ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ. ಪುಸ್ತಕ ಕುರಿತು ವಿಮರ್ಶಕ ಡಾ.ಕೆ.ವೈ.ನಾರಾಯಣಸ್ವಾಮಿ ಮಾತನಾಡಲಿದ್ದಾರೆ. ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ಡಾ.ಎಚ್.ಸಿ ಮಹದೇವಪ್ಪ, ಸಾಹಿತಿ ನಟರಾಜ ಹುಳಿಯಾರ್, ರಂಗಕರ್ಮಿ ಸಿ.ಬಸವಲಿಂಗಯ್ಯ, ಪತ್ರಕರ್ತರಾದ ಜಗದೀಶ್ ಕೊಪ್ಪ, ದಿನೇಶ್ ಅಮೀನ್ ಮಟ್ಟು ಇನ್ನಿತರರು ಭಾಗವಹಿಲಿದ್ದಾರೆ ಎಂದು ಡಾ.ಎಚ್.ಸಿ.ಮಹದೇವಪ್ಪ ಅಭಿಮಾನಿ ಬಳಗದ ಮಹೇಶ್ ಸೋಸಲೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೃತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆನ್ನುಡಿ ಬರೆದಿದ್ದು, ಸಚಿವರ ಮಾಧ್ಯಮ ಸಂಚಾಲಕ ಎಚ್.ಕೆ.ರಮೇಶ್ ನಿರೂಪಣೆ ಮಾಡಿದ್ದಾರೆ. 297 ಪುಟ ಹಾಗೂ 6 ಭಾಗಗಳನ್ನು ಒಳಗೊಂಡಿದೆ ಎಂದರು.
ಬಳಗದ ಮುಖಂಡರಾದ ಮಹೇಶ್ ಅಶೋಕಪುರಂ, ಪ್ರದೀಪ್, ಜೀವನ್, ನಟರಾಜ ಶಿವಣ್ಣ ಇದ್ದರು.