ಯಾದಗಿರಿ: ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ ಭಾರತ ಹೊಂದಿದ್ದು, ಸಂವಿಧಾನದ ಆಶಯ, ತತ್ವ ಸಿದ್ದಾಂತಗಳ ಬಗ್ಗೆ ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಕಾರಿ ಡಾ.ಸುಶೀಲಾ ಬಿ., ಕರೆ ನೀಡಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ನಿಮಿತ್ತ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಸಮಾಜಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಭಾರತ ಸಂವಿಧಾನ ಪೀಠಿಕೆಯ ಜಾಗತಿಕ ವಾಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಗತ್ತಿನ ಶ್ರೇಷ್ಠ, ಅದ್ಭುತ ಸಂವಿಧಾನವನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನಮಗೆ ನೀಡಿದ್ದಾರೆ. ಜಾತಿ,ಮತ,ಪಂಥ, ಲಿಂಗ ಭೇದವಿಲ್ಲದ, ಸಮಾನತೆ, ಸೌಹಾರ್ದತೆ ಹೆಚ್ಚಿಸುವ ಹಾಗೂ ರಾಷ್ಟ್ರ ಐಕ್ಯತೆಯ ಸಿದ್ದಾಂತಗಳನ್ನು ನಮಗೆ ನೀಡಿದೆ. ಇದರ ಸಂಪೂರ್ಣ ಸಾರ ಸಂವಿಧಾನದ ಪೀಠಿಕೆಯಲ್ಲಿದ್ದು, ಎಲ್ಲರೂ ಅರಿಯುವ ಜತೆಗೆ ಮುಂದಿನ ಪೀಳಿಗೆಗೆ ಸಂವಿಧಾನದ ಆಶಯ ಅಳವಡಿಸಿಕೊಳ್ಳುವ ಹಾಗೂ ತತ್ವಸಿದ್ದಾಂತಗಳನ್ನು ತಿಳಿಹೇಳುವ ಕಾರ್ಯ ಮಾಡುವಂತೆ ಸಲಹೆ ನೀಡಿದರು.
ಜಿಪಂ ಸಿಇಒ ಗರೀಮಾ ಪನ್ವಾರ ಮಾತನಾಡಿ, ಉತ್ತಮ ಸಮಾಜ, ನಾಗರಿಕರಾಗಿ ಬದುಕಲು ಸಂವಿಧಾನ ಅದ್ಭುತ ಸಿದ್ದಾಂತಗಳನ್ನು ನೀಡಿದೆ. ಆಥರ್ಿಕ ,ಸಾಮಾಜಿಕ, ಸಾಂಸ್ಕೃತಿಕ, ಸಮಾನತೆ ಧರ್ಮ ಸಹಿಷ್ಣುತೆ, ವ್ಯಕ್ತಿ ಮೌಲ್ಯದಂಥ ಆದರ್ಶಗಳಲ್ಲಿ ಇದರಲ್ಲಿ ಅಡಕವಾಗಿವೆ. ಪೀಠಿಕೆಯು ಸಂವಿಧಾನದ ಸಂಪೂರ್ಣ ಆಶಯ ಎತ್ತಿ ಹಿಡಿದಿದ್ದು, ಅಕಾರಿಗಳು ಹಾಗೂ ನಾಗರಿಕರು ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸಿದಲ್ಲಿ ಭಯವಿಲ್ಲದೆ ತಮ್ಮ ಕರ್ತವ್ಯ ನಿಭಾಯಿಸಬಹುದಾಗಿದೆ. ಇದರಿಂದ ಜನರ ಹಿತಕಾಪಾಡಲೂ ನೆರವಾಗಲಿದೆ ಎಂದು ಹೇಳಿದರು.