ಕಮಲನಗರದ ತಹಸಿಲ್ ಕಚೇರಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ಗ್ರಾಪಂ ಅಧ್ಯಕ್ಷೆ ಸುಶೀಲಾ ಸಜ್ಜನಶೆಟ್ಟಿ, ರಮೇಶ ಪೆದ್ದೆ, ಮಾಣಿಕರಾವ ಪಾಟೀಲ್, ಹಣಮಂತರಾಯ ಕೌಟಗೆ, ಚಂದ್ರಶೇಖರ ನಿರ್ಣೆ, ರಾಜಕುಮಾರ ತಂಬಾಕೆ, ಸುನೀಲ ಕಸ್ತೂರೆ, ಬಾಲಾಜಿ ತೇಲಂಗ್, ಸುಭಾಷ ಗಾಯಕವಾಡ ಇತರರಿದ್ದರು. 
ಜಿಲ್ಲೆ

ಸಂವಿಧಾನದ ಆಶಯಕ್ಕೆ ಎಲ್ಲರೂ ಬದ್ಧರಾಗೋಣ

ಕಮಲನಗರ: ಸಂವಿಧಾನದ ಆಶಯದಂತೆ ಬದುಕು ಕಂಡುಕೊಂಡರೆ ಜೀವನ ಅತೀ ಸುಂದರವಾಗಿ ಕಾಣುತ್ತದೆ. ಜಾತ್ಯತೀತ ರಾಷ್ಟ್ರ ಪರಿಕಲ್ಪನೆ ಕನಸು ಸಾಕಾರ ಮಾಡುವ ನಿಟ್ಟಿನಲ್ಲಿ ಯುವಕರು ಕಾಳಜಿ ವಹಿಸಬೇಕು ಎಂದು ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ ಹೇಳಿದರು.

ಪಟ್ಟಣದ ತಹಸಿಲ್ ಕಚೇರಿ ಆವರಣದಲ್ಲಿ ಭಾನುವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ೭೬ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಶೋಷಿತ ಮತ್ತು ದಲಿತರ ಹಕ್ಕುಗಳನ್ನು ರಕ್ಷಣೆ ಮತ್ತು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳ ಸ್ಥಾಪನೆಯಿಂದ ಸಂವಿಧಾನಬದ್ದ ರಾಷ್ಟ್ರದ ಗೌರವ ಹೆಚ್ಚಾಗುತ್ತದೆ. ಡಾ.ಅಂಬೇಡ್ಕರ್ ಅವರು ಸಂವಿಧಾನದ ಕರಡು ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಿಂದು ವಿವಾಹಕೋಡ್ ಬಿಲ್ ಜಾರಿಗೊಳಿಸಿ ಮಹಿಳೆಯರ ಸ್ವಾತಂತ್ರವನ್ನು ಎತ್ತಿ ಹಿಡಿದ ಶ್ರೇಷ್ಠರಲ್ಲಿ ಒಬ್ಬರು ಎಂದರು.

ಶಾAತಿವರ್ಧಕ ಪ್ರೌಢ ಶಾಲೆ ಮುಖ್ಯಗುರು ಸವಿತಾ ಕಾರಬಾರಿ ಉಪನ್ಯಾಸ ನೀಡಿದರು. ಗ್ರಾಪಂ ಅಧ್ಯಕ್ಷೆ ಸುಶೀಲಾ ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರೇಡ್-೨ ತಹಸೀಲ್ದಾರ್ ರಮೇಶ ಪೆದ್ದೆ, ತಾಪಂ ಇಒ ಮಾಣಿಕರಾವ ಪಾಟೀಲ್, ಸಹಾಯಕ ನಿರ್ದೇಶಕ ಹಣಮಂತರಾಯ ಕೌಟಗೆ, ಪಿಎಸ್‌ಐ ಚಂದ್ರಶೇಖರ ನಿರ್ಣೆ, ಪಿಡಿಒ ರಾಜಕುಮಾರ ತಂಬಾಕೆ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸುನೀಲ ಕಸ್ತೂರೆ, ಗ್ರಾಪಂ ಸದಸ್ಯ ಬಾಲಾಜಿ ತೇಲಂಗ್, ಸುಭಾಷ ಗಾಯಕವಾಡ, ಶ್ರೀರಂಗ ಪರಿಹಾರ, ಯಶವಂತ ಬಿರಾದಾರ, ಬಸವರಾಜ ಪಾಟೀಲ್, ರಂಗರಾವ ಜಾಧವ್, ಸುಭಾಷ ಮಿರ್ಚೆ, ಗೋವಿಂದರಾವ ತಾಂದಳೆ, ಮಾದಪ್ಪಾ ಮಡಿವಾಳ, ವಿಠ್ಠಲರಾವ ಪಾಟೀಲ್, ಏಕನಾಥ ಗಾಯಕವಾಡ ಇತರರಿದ್ದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.