ಜಿಲ್ಲೆ

ಸಂವಿಧಾನ ವಿರೋಧಿ ಡಿಕೆಶಿ

ಕಲಬುರಗಿ: ಸಂವಿಧಾನ ವಿರೋಧಿಯಾದ ರ‍್ಮಾಧಾರಿತವಾಗಿ ಮುಸ್ಲಿಮರಿಗೆ ಶೇ.೪ ಮೀಸಲಾತಿ ನೀಡುವುದಕ್ಕಾಗಿ ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡಿರುವ ಕೆಪಿಸಿಸಿ ಅಧ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿಕೆ ಖಂಡಿಸಿ ನಗರದಲ್ಲಿ ಭಾರತೀಯ ಜನತಾ ಪದಿಂದ ಮಂಗಳವಾರ ಬೃಹತ್​ ಪ್ರತಿಭಟನೆ ನಡೆಸಲಾಯಿತು.

ನಗರದ ರ‍್ದಾರ್​ ವಲ್ಲಭಬಾಯಿ ಪಟೇಲ್​ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್​ ಪ್ರತಿಭಟನಾ ಮೆರವಣಿಗೆ ನಡೆಸಿ, ಡಿ.ಕೆ.ಶಿವಕುಮಾರ ಪ್ರತಿಮೆ ದಹಿಸಿ, ಟೈರ್​ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನ ವಿರೋಧಿ, ಅಂಬೇಡ್ಕರ್​ ವಿರೋಧಿ ಕಾಂಗ್ರೆಸ್​ ಧಿಕ್ಕಾರ, ಡಿ.ಕೆ.ಶಿವಕುಮಾರ ರಾಜೀನಾಮೆ ನೀಡಬೇಕು ಎಂದು ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಕ್ರಮಕ್ಕೆ ಆಗ್ರಹಿಸಿದರು.

ಬಜೆಟ್​ನಲ್ಲಿ ಹಿಂದುಳಿದವರಿಗೆ ಏನನ್ನೂ ನೀಡದೇ ಮುಸ್ಲಿಮರಿಗೆ ಶೇ.೪ ಮೀಸಲಾತಿ ಘೋಷಿಸಿ, ಸಂವಿಧಾನ ಬಾಹಿರ ನಡೆಯನ್ನು ಇಡಲಾಗಿದೆ. ಅಲ್ಲದೇ ಮೀಸಲಾತಿ ನೀಡಲು ಸಂವಿಧಾನವನ್ನೇ ಬದಲಾಯಿಸುತ್ತೇವೆ ಎನ್ನುವ ಮೂಲಕ ಕಾಂಗ್ರೆಸ್​ ತನ್ನ ಅತಿರೇಕತನ ಪ್ರರ‍್ಶಿಸಿದೆ ಎಂದು ಪ್ರತಿಭಟನಾಕಾರರು ಖಂಡಿಸಿದರು.

ಅಧಿವೇಶನದಲ್ಲಿ ಬಿಜೆಪಿಯ ೧೮ ಶಾಸಕರನ್ನು ಸಂವಿಧಾನ ಬಾಹಿರವಾಗಿ ಆರು ತಿಂಗಳು ಅಮಾನತು ಮಾಡಿರುವ ಸಭಾಪತಿಗಳ ನರ‍್ಧಾರವನ್ನು ಖಂಡಿಸಲಾಯಿತು. ಎಸ್ಸಿ, ಎಸ್ಟಿ ಸಮುದಾಯದ ಎಸ್ಸಿಪಿ, ಟಿಎಸ್​ಪಿ ಅನುದಾನವನ್ನು ದರ‍್ಬಳಕೆ ಮಾಡಿಕೊಂಡು ದಲಿತರಿಗೆ ಅನ್ಯಾಯ ಮಾಡಲಾಗಿದೆ. ಕೂಡಲೇ ಹಣ ವಾಪಸ್​ ನೀಡಬೇಕು, ತೊಗರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮಹಾನಗರ ಜಿಲ್ಲಾಧ್ಯ ಚಂದು ಪಾಟೀಲ್​, ಗ್ರಾಮಾಂತರ ಜಿಲ್ಲಾಧ್ಯ ಅಶೋಕ ಬಗಲಿ, ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ್​, ವಿಧಾನ ಪರಿಷತ್​ ಸದಸ್ಯ ಶಶೀಲ ನಮೋಶಿ, ಪ್ರಮುಖರಾದ ಸುಭಾಷ ಗುತ್ತೇದಾರ್​, ಅಮರನಾಥ ಪಾಟೀಲ್​, ನಿತಿನ್​ ಗುತ್ತೇದಾರ್​, ಅವ್ವಣ್ಣ ಮ್ಯಾಕೇರಿ, ಉಮೇಶ ಪಾಟೀಲ್​, ಮಹಾದೇವ ಬೆಳಮಗಿ, ಭಾಗೀರಥಿ ಗುನ್ನಾಪುರ, ಅಪ್ಪು ಕಣಕಿ, ಶಿವಯೋಗಿ ನಾಗನಹಳ್ಳಿ, ಗಿರಿರಾಜ ಯಳಮೇಲಿ, ಮಹೇಶರೆಡ್ಡಿ, ಸುಂದರ ಕುಲ್ರ‍್ಣಿ, ಶಿವಾ ಅಷ್ಟಗಿ, ಮಂಜುನಾಥ ಚಿಲಶೆಟ್ಟಿ, ಗಂಗಾಧರ ಬಿಲಗುಂದಿ, ಮಲ್ಲಿಕರ‍್ಜುನ ಓಕಳಿ, ಅರುಣಕುಮಾರ ಪಾಟೀಲ್​, ಸಂತೋಷ ಹಾದಿಮನಿ, ನಾಗರಾಜ ಮಹಾಗಾಂವಕರ್​, ಶಿವು ಕಣ್ಣಿ, ರಾಜುಗೌಡ ನಾಗನಹಳ್ಳಿ, ಆನಂದ ಲೇಂಗಟಿ, ಸಂಜು ಯಳಸಂಗಿಕರ್​, ಮಹೇಶ ಚವ್ಹಾಣ್​, ಚನ್ನು ಬಂಗೆ, ಪದ್ಮಾವತಿ ದೊಡ್ಡಮನಿ, ರಾಜೇಶ್ವರಿ ಮೇತ್ರೆ, ಸವಿತಾ ಪಾಟೀಲ್​, ವಿಜಯಲ$್ಮ ಗೊಬ್ಬುರಕರ್​, ಶಾಂತಾಬಾಯಿ ಇತರರಿದ್ದರು.