ಜಿಲ್ಲೆ

ಸಂವಿಧಾನ ಜಾಗೃತಿ ಜಾಥಾ ಯಶ್ವಸಿ: ಜಿಲ್ಲಾದ್ಯಂತ ಒಟ್ಟು 143 ಸಂಚಾರ:ಡಿಸಿ

ಹಾಸನ: ಜ.26ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಜಾಥಾಗೆ ಸಂವಿಧಾನ ಜಾಗೃತಿ ಜಾಥಾ ಆರಂಭಗೊಂಡು ಜಿಲ್ಲಾದ್ಯಂತ 130 ಗ್ರಾಮ ಪಂಚಾಯಿತಿ, 5 ಪಟ್ಟಣ ಪಂಚಾಯಿತಿ ಸೇರಿ ಒಟ್ಟು 143 ಕಡೆಗಳಲ್ಲಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಹೇಳಿದರು.
ಸಂವಿಧಾನ ದಿನಾಚರಣೆ ಪ್ರಯುಕ್ತ ಜಿಲ್ಲಾದ್ಯಂತ ಸಂವಿಧಾನ ಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸುತ್ತಿದ್ದು, ಗಣರಾಜ್ಯೋತ್ಸವ ಜಾಥಾಗೆ ಚಾಲನೆ ನೀಡಲಾಯಿತು. 2 ಸ್ತಬ್ದಚಿತ್ರಗಳಗಳ ಮೂಲಕ ಕಲಾತಂಡಗಳು ಮತ್ತು ಸರ್ಕಾರದ ವಿವಿಧ ಯೋಜನೆಗಳ 2 ಪ್ರಚಾರ ವಾಹನ ಜಿಲ್ಲಾದ್ಯಂತ ಸಂಚರಿಸುತ್ತಿದೆ. ಹೋದಲೆಲ್ಲ, ಅದ್ದೂರಿ ಸ್ವಾಗತ, ಉತ್ತಮ ಸ್ಪಂದನೆ ಸಿಗುತ್ತಿದೆ. ಕಾರ್ಯಕ್ರಮದಲ್ಲಿ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರು ಭಾಗಹಿಸುತ್ತಿದ್ದಾರೆ. ಸಂವಿಧಾನದ ಮಹತ್ವದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಕೊಡಿಸಲಾಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಸನ ತಾಲ್ಲೂಕಿನಲ್ಲಿ ಜ.26 ರಿಂದ ಫೆ.1 ರವರೆಗೆ 7 ದಿನಗಳ ಅಂತರದಲ್ಲೇ 37 ಗ್ರಾಮ ಪಂಚಾಯಿತಿಗಳಲ್ಲಿ ಜಾಥಾ ಮುಕ್ತಾಯಗೊಂಡಿದೆ. ಬೇಲೂರು ತಾಲ್ಲೂಕಿನಲ್ಲಿ 8 ದಿನಗಳಲ್ಲಿ 38 ಗ್ರಾ.ಪಂ, ಆಲೂರು ತಾಲುಕಿನಲ್ಲಿ ಫೆ.2 ರಿಂದ ಆರಂಭಿಸಿ ಫೆ.5 ರ ವರೆಗೆ 16 ಗ್ರಾಪಂ ಗಳಲ್ಲಿ ಜಾಥಾ ಮುಕ್ತಾಯಗೊಂಡಿದೆ. ಹೊಳೆನರಸೀಪುರ ತಾಲ್ಲೂಕಿನಲ್ಲಿ ಫೆ.2 ರಿಂದ ಆರಂಭಿಸಿ 14 ಗ್ರಾಪಂ, ಪಟ್ಟಣ ಪಂಚಾಯಿತಿ ಸೇರಿ ಫೆ.4 ರ ಅಂತ್ಯಕ್ಕೆ 15 ಕಾರ್ಯಕ್ರಮ ಮಾಡಲಾಗಿದೆ. ಹಳ್ಳಿ ಮೈಸೂರು ಹೋಬಳಿಯ 12 ಪಂಚಾಯಿತಿಗಳಲ್ಲಿ ಫೆ.20 ರಿಂದ 22 ರ ವರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಫೆ.5 ರಿಂದ ಜಾಥಾ ಸಂಚಾರ ಆರಂಭಗೊಂಡಿದ್ದು, ಫೆ.8 ರ ವರೆಗೆ 20 ಪಂಚಾಯಿತಿಗಳಲ್ಲಿ, ಚನ್ನರಾಯಪಟ್ಟಣದಲ್ಲಿ 21 ಕಾರ್ಯಕ್ರಮ ಮಾಡಲಾಗಿದೆ. ಬಾಕಿ ಇರುವ 21 ಗ್ರಾಪಂಗಳಲ್ಲಿ ಫೆ.12 ರಿಂದ ಒಟ್ಟು 21 ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ.
ಸಕಲೇಶಪುರ ತಾಲ್ಲೂಕಿನಲ್ಲಿ ಫೆ.6 ರಂದು ಜಾಗೃತಿ ಜಾಥಾ ಆರಂಭಗೊಂಡಿದ್ದು, ಫೆ.8 ರ ವರೆಗೆ 12 ಪಂಚಾಯಿತಿಗಳಲ್ಲಿ, ಪುರಸಭೆ ಸೇರಿ ಒಟ್ಟು 13 ಕಾರ್ಯಕ್ರಮ ನಡೆಸಲಾಗಿದೆ. ಫೆ.11 ರಿಂದ 14 ಪಂಚಾಯಿತಿಗಳಲ್ಲಿ ಜಾಥಾ ಸಂಚಾರ ಮಾಡಲಿದೆ. ಅರಕಗಲೂಡು ತಾಲ್ಲೂಕಿನ 36 ಗ್ರಾಪಂಗಳಲ್ಲಿ ಫೆ.12 ರಿಂದ 19 ರ ವರೆಗೆ, ಅರಸೀಕೆರೆ ತಾಲ್ಲೂಕಿನ 46 ಪಂಚಾಯಿತಿಗಳಲ್ಲಿ ಫೆ.13 ರಿಂದ 21 ರ ವರೆಗೆ ಕಾರ್ಯಕ್ರಮ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಸಂವಿಧಾನ ಜಾಗೃತಿ ಜಾಥಾ ವೇಳೆ ಹಾಸನ ತಾಲ್ಲೂಕಿನಲ್ಲಿ ಕಟ್ಟಾಯ, ಶೆಟ್ಟಿಹಳ್ಳಿ, ಹನುಮಂತಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ಕಡೆಗಳಲ್ಲಿ ಬೈಕ್ ರ‌್ಯಾಲಿ ನಡೆಸಲಾಗಿದೆ. ಬೇಲೂರು ತಾಲ್ಲೂಕು ಸವಾಸಿಹಳ್ಳಿ, ಹಗರೆ, ನಾರ್ವೆಪೇಟೆ ಪಂಚಾಯಿತಿಯಲ್ಲಿ 3, ಹೊಳೆನರಸೀಪುರ ತಾಲ್ಲೂಕಿನ ಹಂಗರಹಳ್ಳಿ, ಮೂಡಲಹಿಪ್ಪೆ, ಐಚನಹಳ್ಳಿ, ಬಾಗೀವಾಳು, ಪಡುವಲಹಿಪ್ಪೆ, ಹೊಳೆನರಸೀಪುರ ಪಟ್ಟಣ ಸೇರಿ 6, ಆಲೂರು ತಾಲೂಕು ಮಡಬಲು ಪಂಚಾಯಿತಿ 1, ಚನ್ನರಾಯಪಟ್ಟಣ ತಾಲ್ಲೂಕು ಮತಿಘಟ್ಟ, ದಿಡಗ, ಹಿರೀಸಾವೆ, ಬಾಳಗಂಜಿ 4 ಮತ್ತು ಸಕಲೇಶಪುರ ತಾಲ್ಲೂಕು ಉದೇವಾರ, ಬಿರಡಹಳ್ಳಿ, ಮಳಲಿ, ಹಾನುಬಾಳು, ಹೆಬ್ಬಸಾಲೆ, ಚಾಮನಹಳ್ಳಿ 6 ಸೇರಿ 23 ಕಡೆಗಳಲ್ಲಿ ಬೈಕ್ ರ‌್ಯಾಲಿ ನಡೆಸಲಾಗಿದೆ ಎಂದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್.ಹೆಚ್.ಲಕ್ಷ್ಮೇಗೌಡ ಹಾಜರಿದ್ದರು.