ಚಿತ್ರದುರ್ಗ: ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಡುಗೆಯಾಗಿರುವ ನೀಡಿರುವ ಭಾರತದ ಸಂವಿಧಾನ ವಿಶ್ವದಲ್ಲೇ ಅತ್ಯಂತ ಉತ್ತಮ ಸಂವಿಧಾ ನವಾಗಿದ್ದು,ಇದರ ಆಶಯಗಳಿಗೆ ಅನುಗುಣವಾಗಿ ದೇಶದಲ್ಲಿ ಕಾನೂನು,ಕಾಯ್ದೆಗಳನ್ನು ಜಾರಿಗೊಳಿಸಬೇಕಾಗುತ್ತದೆ ಎಂದು ಪ್ರಧಾನ ಜಿ ಲ್ಲಾ ಮತ್ತು ಸತ್ರ ನ್ಯಾಯಾಧೀಶ ರೋಣ್ ವಾಸುದೇವ ಹೇಳಿದರು.
ಶನಿವಾರ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ಏರ್ಪ ಡಿಸಿದ್ದ ಕಾನೂನು ಅರಿವು ನೆರವು ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ವಿಶ್ವದಲ್ಲಿಯೇ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿರಬೇಕು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಜನರ ಆಶೋತ್ತರಗಳಿಗೆ ಸ್ಪಂದಿಸ ಬೇ ಕು. ಕಾನೂನು ಸೇವಾ ಪ್ರಾಧಿಕಾರ ಜನಸಾಮಾನ್ಯರಿಗೆ ಕಾನೂನು ನೆರವು ನೀಡುವುದರೊಂದಿಗೆ ರಾಜಿ ಸಂಧಾನ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮವಹಿಸಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಮಾತನಾಡಿ,ಪ್ರತಿ ವರ್ಷ ನ.9ನ್ನು ಕಾನೂನು ಸೇವೆಗಳ ದಿನವೆಂದು ಆಚರಿಸಲಾಗುತ್ತ ದೆ.ಯಾವೊಬ್ಬ ಭಾರತೀಯ ನಾಗರೀಕನು ಕೂಡ ಆರ್ಥಿಕ ದಿವಾಳಿತನದಿಂದ,ನ್ಯಾಯ ಪಡೆಯುವಲ್ಲಿ ವಂಚಿತನಾಗಬಾರದು ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ ಎಂದರು. ಪ್ರಧಾನ ಕಾನೂನು ಅಭಿರಕ್ಷಕ ಎಸ್.ವಿಜಯ್‌ಕುಮಾರ್ ಉಪನ್ಯಾಸ ನೀಡಿದರು.ಪ್ರಾಂಶು ಪಾಲ ಎಚ್.ಗುಡ್ಡದೇಶ್ವರಪ್ಪ,ವಕೀಲರ ಸಂಘದ ಕಾರ‌್ಯದರ್ಶಿ ಆರ್.ಗಂಗಾಧರ್,ಕುಮಾರಸ್ವಾಮಿ,ಆರ್.ವೆಂಕಟೇಶ್,ಡಾ.ಶಿವಣ್ಣ,ಡಾ.ಚ ನ್ನಕೇಶವ ಇತರರು ಇದ್ದರು.