ಕಲಬುರಗಿ: ಶಿಕ್ಷಣ ತಜ್ಞರು, ರಾಜ್ಯಗಳ ಪ್ರತಿನಿಧಿಗಳೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ ಜಾರಿಗೊಳಿಸಲು ಹೊರಟಿರುವ ಹೊಸ ಶಿಕ್ಷಣ ನೀತಿಯಲ್ಲಿ ಹಲವು ದೋಷಗಳಿವೆ, ಅವನ್ನು ಸರಿಪಡಿಸುವುದು ಅಗತ್ಯವಾಗಿದೆ. ಅದರಲ್ಲೂ ಶಾಲಾ ಪೂರ್ವ ಶಿಕ್ಷಣ ಬಗ್ಗೆ ಸ್ಪಷ್ಟತೆ ಇಲ್ಲ. ಇದರಿಂದಾಗಿ ದೇಶದಲ್ಲಿರುವ ಅಂಗನವಾಡಿ ಕೇಂದ್ರಗಳು ಮುಚ್ಚಲಿವೆ. ಶಿಕ್ಷಣದಲ್ಲಿ ಮೀಸಲಾತಿ ಮರೀಚಿಕೆಯಾಗಲಿದೆ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂಬಿತ್ಯಾದಿ ವಿಚಾರಗಳು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹೊಸ ಶಿಕ್ಷಣ ನೀತಿಯಲ್ಲಿ ಶಾಲಾ ಪೂರ್ವ ಶಿಕ್ಷಣ ಕುರಿತ ಕಲಬುರಗಿ ವಿಭಾಗ ಮಟ್ಟದ ದುಂಡು ಮೇಜಿನ ಸಭೆಯಲ್ಲಿ ವ್ಯಕ್ತವಾದವು.
ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು), ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ, ಭಾರತ ವಿದ್ಯಾರ್ಥಿ ಫೆಡರೇಷನ್ ಇನ್ನಿತರ ಸಂಘಟನೆಗಳು ಜತೆಗೂಡಿ ನಗರದ ಸೂಪರ್ ಮಾರ್ಕೆಟನಲ್ಲಿರುವ ಎಚ್ಕೆಸಿಸಿಐ ಸಭಾಂಗಣದಲ್ಲಿ ದುಂಡು ಮೇಜಿನ ಸಭೆ ಆಯೋಜಿಸಿದ್ದವು.
ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಮಾತನಾಡಿ, ಹೊಸ ಶಿಕ್ಷಣ ನೀತಿಯ ಚರ್ಚಿಸದೆ ಜಾರಿಗೆ ತರಲಾಗುತ್ತಿದೆ. ಬಿಸಿಯೂಟವನ್ನು ಖಾಸಗಿ ಧಾರ್ಮಿಕ ಸಂಸ್ಥೆಗಳಿಗೆ ನೀಡಿ, ಅಂಗನವಾಡಿಗಳನ್ನೂ ಮುಚ್ಚುವ ಸ್ಪಷ್ಟ ಉದ್ದೇಶ ಹೊಂದಿರುವುರಿಂದ ದೇಶದಲ್ಲಿರುವ 28 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಹಾಗೂ 26 ಲಕ್ಷ ಬಿಸಿಯೂಟ ನೌಕರರ ಬದುಕು ಬೀದಿಗೆ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಿಯುಕೆ ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಿರಣ ಗಾಜನೂರ ಸಭೆ ಉದ್ಘಾಟಿಸಿದರು. ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ ಕಡಗದೆ, ಸಿಐಟಿಯು ಜಿಲ್ಲಾಧ್ಯಕ್ಷೆ ಗೌರಮ್ಮ ಪಾಟೀಲ, ಪ್ರಮುಖರಾದ ಶರಣಬಸಪ್ಪ ಮಮಶೆಟ್ಟಿ, ಸುನಂದಾ, ಸಿದ್ದಮ್ಮ, ಶಾಂತಾ ಘಂಟೆ, ಸಿದ್ಧಲಿಂಗ ಪಾಳಾ ಸೇರಿದಂತೆ ಆರು ಜಿಲ್ಲೆಗಳ ಮುಖಂಡರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಎನ್ಇಪಿ ಆಯಾಮ ಪರಾಮಶರ್ೆ ಅತ್ಯಗತ್ಯ
ಯಾವುದೇ ಶಿಕ್ಷಣ ನೀತಿಯಲ್ಲಿ ಒಂದು ಮಗು ಅಥವಾ ಸಮುದಾಯವನ್ನು ದೂರವಿಟ್ಟರೆ ಅದು ಜನವಿರೋಧ ನೀತಿ ಎನ್ನಲಾಗುತ್ತದೆ. ಹೀಗಾಗಿ ಹೊಸ ಶಿಕ್ಷಣ ನೀತಿಯ ಆಯಾಮಗಳನ್ನು ಪರಾಮಶರ್ೆ ನಡೆಸುವುದು ಅಗತ್ಯವಾಗಿದೆ ಎಂದು ಸಿಯುಕೆ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ ಎಂದು ಅಭಿಪ್ರಾಯಿಸಿದರು. ನಗರದಲ್ಲಿ ಶನಿವಾರ ಜರುಗಿದ ಶಾಲಾ ಪೂರ್ವ ಶಿಕ್ಷಣದ ಕುರಿತು ಹೊಸ ಶಿಕ್ಷಣ ನೀತಿ ಹೇಳುವುದೇನು? ಕುರಿತ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿ, ಗ್ರಾಮೀಣ ಬಡ ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ ನೀಡುವುದರ ಜತೆಗೆ ಪೌಷ್ಟಿಕವಾಗಿ ಬೆಳೆಸುವ ಉದ್ದೇಶದಿಂದ ಅಂಗನವಾಡಿ ಶುರುವಾಗಿವೆ, ಎನ್ಇಪಿಯಿಂದ ಅವುಗಳ ಉಳುವಿನ ಬಗ್ಗೆ ಪ್ರಶ್ನೆ ಏಳಲಿದೆ. ಅಲ್ಲದೆ ಇದರ ಬಗ್ಗೆ ನೀತಿಯಲ್ಲಿ ಸ್ಪಷ್ಟವಾದ ಮಾಹಿತಿಯಲ್ಲ ಎಂದರು.
14 ವರ್ಷದವರೆಗೂ ಉಚಿತ ಕಡ್ಡಾಯ ಶಿಕ್ಷಣ ನೀಡುವುದು, ಆರ್ಟಿಇ ಬಗ್ಗೆ ಬಗ್ಗೆಯೂ ಸ್ಪಷ್ಟವಾಗಿಲ್ಲ. ಮೆರಿಟ್ ಆಧಾರಿತವಾಗಿ ಮೀಸಲಾತಿ ದೊರೆಯುತ್ತದೆ ಎಂದು ಹೇಳಿರುವುದರಿಂದ ಪರಿಶಿಷ್ಟ ಮಕ್ಕಳ ಶೈಕ್ಷಣಿಕ ಮೀಸಲಾತಿ ಏನಾಗುತ್ತದೆ ಎಂಬ ಬಗ್ಗೆ ಉಲ್ಲೇಖಿಸಿಲ್ಲ. ಉಚಿತ, ಕಡ್ಡಾಯ ಹಾಗೂ ಏಕರೂಪದ ಶಿಕ್ಷಣದ ಕುರಿತು ಹೇಳಿದರೂ ಅದರಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ ಸಂವಿಧಾನದ ಮೂಲ ತತ್ವಗಳಾದ ಸಮಾಜವಾದ, ಸಮಾನತೆ, ಜಾತ್ಯತೀತ ನಿಲುವುಗಳಿಗೆ ಪೆಟ್ಟು ಬೀಳಲಿದೆ.
| ಅಮರೇಶ ಕಡಗದೆ ಎಸ್ಎಫ್ಐ ರಾಜ್ಯಾಧ್ಯಕ್ಷ