ವೇಣುಗೋಪಾಲ ಸ್ವಾಮಿ ಹಾಲೋಕುಳಿ ಜಾತ್ರೆ ನಿಮಿತ್ಯ ದೇವರಗಂಬ ಏರುತ್ತಿರುವುದು.  
ಜಿಲ್ಲೆ

ಸಂಭ್ರಮದಿAದ ನಡೆದ ಹಾಲೋಕುಳಿ

ಹರೀಶ ಕುಲಕರ್ಣಿ

ಸುರಪುರ: ಸಗರ ನಾಡಿನ, ಸುಪ್ರಸಿದ್ಧ ಐತಿಹಾಸಿಕ ವೇಣುಗೋಪಾಲ ಸ್ವಾಮಿಯ ಹಾಲೋಕುಳಿ ಜಾತ್ರೆ ಬುಧವಾರ ಸಂಭ್ರಮದಿAದ ನಡೆಯಿತು.
ಧಾರ್ಮಿಕ ವಿಧಿ ವಿಧಾನದಂತೆ ಮಂಗಳವಾರ ಬೆಳಗ್ಗೆ 5,30ಕ್ಕೆ ವೇಣುಗೋಪಾಲ ಸ್ವಾಮಿಗೆ ಸುಪ್ರಭಾತ ಪೂಜೆ ಬಳಿಕ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಸ್ವಾಮಿಗೆ ವಿವಿಧ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಸುರಪುರ ಸಂಸ್ಥಾನದ ದರಬಾರಿನಲ್ಲಿಯೂ ಬೆಳಗಿನಿಂದಲೂ ವಿವಿಧ ಪೂಜಾ ಕರ‍್ಯಕ್ರಮಗಳು ಜರುಗಿದವು.

ಬುಧವಾರ ಬೆಳಗ್ಗೆಯಿಂದಲೇ ಸುರಪುರ ನಗರ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಹರಕೆ ತೀರಿಸಿದರು. ಸಂಜೆ ಸುರಪುರ ಸಂಸ್ಥಾನದಿAದ ಹಣ್ಣುಕಾಯಿ, ಹೂವನ್ನು ಕೊಂಡೊಯ್ದು ಪೂಜೆ ಸಲ್ಲಿಸಲಾಯಿತು. ಬಳಿಕ ಗೋಪಾಲ ಸ್ವಾಮಿ ಪಲ್ಲಕ್ಕಿ ಸೇವೆ ನೆರವೇರಿತು. ಗರುಡ ಸೇವೆಯೂ ಅಪಾರ ಭಕ್ತರ ಮಧ್ಯೆ ಜರುಗಿತು.

ಅರಮನೆಯಿಂದ ರಾಜ ಗುರುಗಳೊಂದಿಗೆ ರಾಜ ಮನೆತನದ ವತನದಾರರು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಿದರು. ಸುರಪುರ ಸಂಸ್ಥಾನದ ಪ್ರತಿನಿಧಿಯಾಗಿ ಗಣಪತಿರಾವ ಜಹಾಗೀರದಾರ ಅವರು ನಾಣ್ಯ ಚಿಮ್ಮುವ ಮೂಲಕ ದೇವರ ಸ್ತಂಭಾರೋಹಣಕ್ಕೆ ಚಾಲನೆ ನೀಡಿದರು.
ದೇವರಗಂಬ ಏರುವ ಪ್ರತಿನಿಧಿಗಳು ದೇವರಸ್ತಂಭವೇರಿ ಬಾಳೆಹಣ್ಣು ಹರಿದರು. ಇದರ ಮೂಲಕ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಮೊದಲ ಸರಳವಾಗಿ ನೆರವೇರಿಸಲಾಯಿತು. ಸಿಪಿಐ ಆನಂದ ವಾಗ್ಮೋಡೆ ನೇತೃತ್ವದಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಅರಸು ಮನೆತನದ ಪ್ರತಿನಿಧಿಗಳಾದ ದಿನೇಶ್ ಮಂತ್ರಿ, ಸುನೀಲ್ ಪಟ್ಟಣಶೆಟ್ಟಿ, ವೀರೇಶ ದೇಶಮುಖ, ಉಸ್ತಾದ್ ವಜಾಹತ್ ಹುಸೇನ್, ಅಜೀಮ್ ಬೆಳ್ಳಿಬತ್ತ, ಸಿದ್ದಲಿಂಗಯ್ಯ ಸ್ವಾಮಿ ಕಡ್ಲಪ್ಪನವರಮಠ, ಶರಣು ಕಳ್ಳಿಮನಿ ಸೇರಿ 14 ಕೇರಿಯ ವತನದಾರರು, ಅರ್ಚಕ ಆಂಜನೇಯಚಾರಲು ಇತರರಿದ್ದರು.