ಜಿಲ್ಲೆ

ಸಂಭ್ರಮದ ಶ್ರೀ ಕೋಡಿದೇವಿ ರಥೋತ್ಸವ

ಗಂಡಸಿ: ಯರಗನಾಳು ಶ್ರೀ ಕೋಡಿದೇವಿ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು.

ಜಾತ್ರಾ ಮಹೋತ್ಸವದ ಪ್ರಯುಕ್ತ ಯರಗನಾಳು, ದೊಡ್ಡಯರಗನಾಳು, ಹಿರಿಯಾಳು, ಹೋರಿ ಮಂಗಳಾಪುರ, ಬಸವನಪುರ, ನಾರಾಯಣಪುರ, ತಿಮ್ಲಾಪುರ, ಜೋಯಿಸರಹಳ್ಳಿ, ಹಿರಿ ಸಮುದ್ರ ಗ್ರಾಮಗಳ ಪ್ರಮುಖ ಬೀದಿಗಳನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಭಾನುವಾರ ಬೆಳಗ್ಗೆ ಯರಗನಾಳು, ದೊಡ್ಡಯರಗನಾಳು, ಹಿರಿಯಾಳು ಗ್ರಾಮಗಳ ಚಿಕ್ಕರಥೋತ್ಸವ ನಡೆಯಿತು. ಅಮ್ಮನವರ ಮೂಲಸ್ಥಾನದಲ್ಲಿ ಪೂಜಾ ವಿಧಾನಗಳನ್ನು ನಡೆಸಿದ ಬಳಿಕ ಶ್ರೀ ಕೋಡಿದೇವಿ, ಶ್ರೀ ಅಂತರಘಟ್ಟಮ್ಮ ದೇವಿಯ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮೂಲಕ ರಥದ ಬಳಿಗೆ ತಂದು ಪ್ರದಕ್ಷಣೆ ಹಾಕಿ ರಥದ ಮೇಲೆ ಕೂರಿಸಿ ರಥಕ್ಕೆ ಬಲಿ ಪ್ರಧಾನ ಕಾರ್ಯನಡೆಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸುಡು ಬಿಸಿಲನ್ನು ಲೆಕ್ಕಿಸದೆ ಭಕ್ತರು ರಥವನ್ನು ಎಳೆದರು.

ಭಕ್ತರಿಗೆ ಉಪಾಹಾರ, ಪಾನಕ, ಮಜ್ಜಿಗೆ ವಿತರಿಸಲಾಯಿತು. ಜಾತ್ರಾ ಸಮಿತಿ ಅಧ್ಯಕ್ಷ ಚಂದ್ರೇಗೌಡ, ಧರ್ಮದರ್ಶಿ ಪಟೇಲ್ ಗಿಡ್ಡ್ಡೇಗೌಡ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೈ.ಎಂ.ಮಲ್ಲೇಶ್, ಕಾರ್ಯದರ್ಶಿ ನಂಜೇಗೌಡ, ಸದಸ್ಯರು ಹಾಜರಿದ್ದರು.