ಗುರುಮಠಕಲ: ಪಟ್ಟಣದ ನಾರಾಯಣಪುರ ಬಡಾವಣೆಯ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಪಲ್ಲಕ್ಕಿ ಮಹೋತ್ಸವವು ಹಾಗೂ ಅಗ್ನಿ ಪ್ರವೇಶ ಮಂಗಳವಾರ ಸಂಭ್ರಮದಿAದ ಜರುಗಿತು.
ಶ್ರಾವಣ ಮಾಸ ನಂತರದ ಎರಡನೇ ಮಂಗಳವಾರ ನಡೆಯುವ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ರಾತ್ರಿಯಿಂದಲೇ ಭಜನೆ ಆರಂಭವಾಗಿ, ಬೆಳಗ್ಗೆ ವಾದ್ಯ ಮೇಳದೊಂದಿಗೆ ನಗರೇಶ್ವರ ದೇವಸ್ಥಾನದ ಬಾವಿಯಲ್ಲಿ ಗಂಗ ಪೂಜೆÀ ಸಲ್ಲಿಸಲಾಯಿತು.
ನಂತರ ವೀರಭದ್ರೇಶ್ವರ ಮೂರ್ತಿಗೆ ವಿಶೇಷ ಅಭಿಷೇಕ, ಅಲಂಕಾರ ಮತ್ತು ಮಹಾ ಮಂಗಳಾರತಿ ಜರುಗಿದವು. ಇದಾದ ನಂತರ ವೀರಭದ್ರೇಶ್ವರ ಮೂರ್ತಿಪಲ್ಲಕ್ಕಿ ಉತ್ಸವದಲ್ಲಿ ಪುರವಂತರ ಸೇವೆ ನೋಡುಗರ ಗಮನ ಸೆಳೆಯಿತು. ಅಗ್ನಿಕುಂಡದ ಬಳಿ ವೀರಭದ್ರೇಶ್ವರ ಮಹಾರಾಜಕಿ ಜೈ ಎಂಬ ಘೋಷಗಳು ಮೊಳಗಿದವು. ಈ ಮಧ್ಯೆ ಭಕ್ತರು ಅಗ್ನಿ ತುಳಿಯುವ ಕರ‍್ಯ ನಡೆಯಿತು. ಈ ವೇಳೆ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಅಶೀರ್ವಚನ ನೀಡಿದರು. ಶಾಸಕÀ ಶರಣಗೌಡ ಕಂದಕೂರ ಸೇರಿ ಅನೇಕರು ಭಾಗವಹಿಸಿದ್ದರು.