ನಿಪ್ಪಾಣಿ: ಇಲ್ಲಿನ ಬಸವೇಶ್ವರ ನಗರದ ಶ್ರೀವೀರಭದ್ರೇಶ್ವರ ಜಾತ್ರಾ ಮಹೋತ್ಸವ ಈಚೆಗೆ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ ಶ್ರೀ ವೀರಭದ್ರೇಶ್ವರ ಹಾಗೂ ಭದ್ರಕಾಳಿ ದೇವಿಗೆ ರುದ್ರಾಭಿಷೇಕ ಹಾಗೂ ಮಹಾಪೂಜೆ ನೆರವೇರಿತು. ಬಳಿಕ ಪಲ್ಲಕ್ಕಿ, ಗುಗ್ಗಳೋತ್ಸವ, ಆರತಿ ಹಾಗೂ ಮಹಾಪ್ರಸಾದ ನಡೆಯಿತು. ಸಂಜೆ ಸ್ಥಳೀಯ ವೆಂಕಟೇಶ್ವರ ಮಂದಿರದ ಶ್ರೀವಿಷ್ಣು ಸಹಸ್ರನಾಮ ಮಂಡಳಿ ವತಿಯಿಂದ ಲಲಿತ ಸಹಸ್ರನಾಮ, ಸ್ತೋತ್ರ ಪಠಣ, ಕುಂಕುಮಾರ್ಚನೆ ಹಾಗೂ ಮಹಾ ಮಂಗಳಾರತಿ ನೆರವೇರಿಸಲಾಯಿತು. ಶ್ರೀ ವೀರಭದ್ರೇಶ್ವರ ಮಹಿಳಾ ಭಜನಾ ಮಂಡಳಿ ವತಿಯಿಂದ ಭಜನೆ ಸೇವೆ ಜರುಗಿತು.
ವಿರೂಪಾಕ್ಷಲಿಂಗ ದೇವಸ್ಥಾನದ ಪ್ರಾಣಲಿಂಗ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಜಾತ್ರಾ ಸಮಿತಿ ಅಧ್ಯಕ್ಷ ಚಂದ್ರಕಾಂತ ತಾರಳೆ, ದೇವಸ್ಥಾನ ಸಮಿತಿ ಅಧ್ಯಕ್ಷ ಸುನೀಲ ನೇಜೆ, ಉಪಾಧ್ಯಕ್ಷ ರವೀಂದ್ರ ವಾಳವೆ, ಕಾರ್ಯದರ್ಶಿ ಬಸವರಾಜ ಬೋರಗಲೆ, ಸಂಚಾಲಕ ಬಸವಪ್ರಭು ತೋಡಕರ, ದಿಲೀಪ ಪಠಾಡೆ, ಅನಿಲ ಶಾಂಡಗೆ, ಸಿದ್ಧವೀರ ಖಜ್ಜನ್ನವರ, ಅಣ್ಣಾಸಾಹೇಬ ಸೂರ್ಯವಂಶಿ, ಭರಮು ಸಾತವಾರ, ಮಲ್ಲಪ್ಪ ಮುನ್ನೋಳಿ, ರಾವಸಾಹೇಬ ಹುನ್ನರಗಿ, ಪುಂಡಲೀಕ ಕಾಂಬಳೆ, ಶಿವಪುತ್ರಪ್ಪ ಸುನ್ನಾಳ, ಶಂಕರ ಸೊಲಬನ್ನವರ, ಪುಷ್ಕರಾಜ ತಾರಳೆ, ಬಸವರಾಜ ಜಡಿ, ಚಂದ್ರಶೇಖರ ಚಂದುರೆ, ಸತೀಶ ಫುಟಾನೆ ಇತರರಿದ್ದರು.