ಬೆಟಗೇರಿ: ಐದು ವರ್ಷಕ್ಕೊಮ್ಮೆ ಜರುಗುವ ಇಲ್ಲಿನ ದ್ಯಾಮವ್ವದೇವಿ ಜಾತ್ರೆ ಗುರುವಾರ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ ಡಾ.ಅಂಬೇಡ್ಕರ್ ವೃತ್ತದಲ್ಲಿ ದೇವಿಗೆ ನೈವೇದ್ಯ, ಉಡಿ ತುಂಬುವ ಕಾರ್ಯಕ್ರಮ ಬಳಿಕ ದೇವಿಯನ್ನು ಪ್ರಮುಖ ಬೀದಿಗಳ ಮೂಲಕ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಕೂಡ್ರಿಸಲಾಯಿತು.
ಬೆಳಗ್ಗೆ 8 ಗಂಟೆಗೆ 45-55 ಎಚ್‌ಪಿ ಒಳಗಿನ ಟ್ರಾೃಕ್ಟರ್-ಟ್ರಾೃಕ್ಟರ್ ಜಗ್ಗುವ ಸ್ಪರ್ಧೆ, ಮಧ್ಯಾಹ್ನ 12 ಗಂಟೆಗೆ
ಓಪನ್ ಟಗರಿನ ಕಾಳಗ, 2ಗಂಟೆಗೆ ಹಾಲಲ್ಲಿನ ಟಗರಿನ ಸ್ಪರ್ಧೆ ಜರುಗಿತು.
ರಾತ್ರಿ 7 ಗಂಟೆಗೆ ಸ್ಥಳೀಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಝೀ ವಾಹಿನಿ ಕಲಾವಿದೆ ಪ್ರಗತಿ ಬಡಿಗೇರ ಅವರಿಂದ ಸಂಗೀತ ಕಾರ್ಯಕ್ರಮ, ಗೋಕಾಕ ರತಿಕಾ ನೃತ್ಯ ನಿಕೇತನ ಅವರಿಂದ ಭರತನಾಟ್ಯ, ರಾಜೇಂದ್ರ ಮತ್ತು ನರೇಂದ್ರ ಲಕಾಟಿ ಅವರಿಂದ ಯೋಗ ನೃತ್ಯ ಜರುಗಿತು. ಭಕ್ತರು ಪರಸ್ಪರ ಭಂಡಾರ ಎರಚುವ ಮೂಲಕ ಜಾತ್ರೆಯಲ್ಲಿ ಸಂಭ್ರಮಿಸಿದರು.