ಮುಂಡರಗಿ: ತಾಲೂಕಿನ ಜಾಲವಾಡಗಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಾನಿಹಳ್ಳಿ ಪುರವರ್ಗ ಮಠದ ಶ್ರೀ ಡಾ. ಮಳೆಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವ ಸೋಮವಾರ ಸಡಗರ, ಸಂಭ್ರಮದಿಂದ ಜರುಗಿತು.
ವೀರಭದ್ರೇಶ್ವರ ದೇವಸ್ಥಾನದಿಂದ ಹೊರಟ ಅಡ್ಡಪಲ್ಲಕ್ಕಿ ಉತ್ಸವ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ದೇವಸ್ಥಾನ ತಲುಪಿತು. ಪೂರ್ಣ ಕುಂಭಮೇಳ, ಬಾಜಾಭಜಂತ್ರಿ, ಸಮಾಳ, ನಂದಿಕೋಲು ಕುಣಿತ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಮೆರುಗು ನೀಡಿದವು. ಗ್ರಾಮದ ಹಿರಿಯರಾದ ವೀರಣ್ಣ ಹಣಜಿ, ವೀರನಗೌಡ ಬಿ. ಪಾಟೀಲ, ಸಿದ್ದಲಿಂಗಸ್ವಾಮಿ ಪಾಟೀಲ, ವಿರೂಪಾಕ್ಷಯ್ಯ ಡಂಬಳಮಠ, ವೀರನಗೌಡ ಪಿ. ಪಾಟೀಲ, ಮಲ್ಲಿಕಾರ್ಜುನ ಹಣಜಿ, ದಿಳ್ಳೆಪ್ಪ ಹಡಗಲಿ, ನಿಂಗಪ್ಪ ಹಡಗಲಿ, ಫಕೀರಪ್ಪ ರಘುನಾಥನಹಳ್ಳಿ, ನೀಲನಗೌಡ ಪಾಟೀಲ, ಶೇಖರಗೌಡ ಪಾಟೀಲ, ಚನ್ನಬಸಪ್ಪ ಉಪ್ಪಾರ, ಹನುಮಂತಪ್ಪ ಚೂರಿ, ಬಸಯ್ಯ ಡಂಬಳಮಠ, ನಾಗರಾಜ ಗಡ್ಡೆಪ್ಪನವರ, ನಾಗನಗೌಡ ಪಾಟೀಲ, ಇತರರಿದ್ದರು.