ಜಿಲ್ಲೆ

ಸಂಭ್ರಮದ ಗುರುಸಿದ್ದೇಶ್ವರಸ್ವಾಮಿ ರಥೋತ್ಸವ

Kodagu


ಶನಿವಾರಸಂತೆ: ಸಮೀಪದ ಅಂಕನಹಳ್ಳಿ ತಪೋಕ್ಷೇತ್ರ ಮನೆಹಳ್ಳಿ ಮಠದ ಶ್ರೀ ಗುರುಸಿದ್ದೇಶ್ವರಸ್ವಾಮಿ ರಥೋತ್ಸವ ಇತ್ತೀಚೆಗೆ ಸಂಭ್ರಮದಿಂದ ನೆರವೇರಿತು.

ಮಠದಲ್ಲಿ ದೊಡ್ಡ ಚಂದ್ರಮಂಡಲೋತ್ಸವ ಸೇವೆ ನೆರವೇರಿಸಿದ ಬಳಿಕ ಸ್ವಾಮಿಯವರ ಪ್ರಾಕಾರ ಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು. ನಂತರ ರಥೋತ್ಸವಕ್ಕೆ ಪೂಜೆ ಸಲ್ಲಿಸಲಾಯಿತು. ಸಂಜೆ 6:30 ರಿಂದ ರಾತ್ರಿ 10 ಗಂಟೆವರೆಗೆ ಮಠದಲ್ಲಿ ಹಣತೆಯ ಬೆಳಕಿನಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನೆರವೇರಿತು.

ಬಳಿಕ ವೃಷಭ ಲಿಂಗೇಶ್ವರಸ್ವಾಮಿ ಸನ್ನಿಧಾನದಲ್ಲಿ ಮಹಾಮಂಗಳಾರತಿ, ತೀರ್ಥ ಪ್ರಸಾದ ನೀಡಲಾಯಿತು. ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.