ಜಿಲ್ಲೆ

ಸಂಭ್ರಮದ ಅಜ್ಜ-ಅಜ್ಜಿಯರ ದಿನಾಚರಣೆ

ಚಿತ್ರದುರ್ಗ: ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಅಜ್ಜ-ಅಜ್ಜಿಯರ ದಿನಾಚರಣೆಯನ್ನು ಶಾಲೆಯ ಮಕ್ಕಳು ಸಂಭ್ರಮದಿಂದ ಶನಿವಾರ ಆಚರಿಸಿದರು. ತಾತ, ಅಜ್ಜಿ, ಮೊಮ್ಮಕ್ಕಳ ವೇಷಭೂಷಣದೊಂದಿಗೆ ಗಮನ ಸೆಳೆದರು.

ಸಂಸ್ಥೆಯ ಆಡಳಿತಾಧಿಕಾರಿ ಡಾ.ಕೆ.ಎನ್.ಸ್ವಾಮಿ ಉದ್ಘಾಟಿಸಿದರು. ಅತಿಥಿಗಳಾದ ನಿರ್ಮಲಾ, ರಮೇಶ್‌ರಾವ್, ಶಾಲೆಯ ಐಸಿಎಸ್‌ಇ ಪ್ರಾಂಶುಪಾಲ ಪಿ.ಬಸವರಾಜಯ್ಯ, ಮುಖ್ಯ ಶಿಕ್ಷಕ ಸಿ.ಡಿ.ಸಂಪತ್‌ಕುಮಾರ್ ಇತರರಿದ್ದರು.