ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಟಾಸ್ಕ್​ಪೋರ್ಸ್​ ಸಮಿತಿ ಹಾಗೂ ಅಧಿಕಾರಿಗಳ ಸಭೆಯಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿದರು. ರವೀಂದ್ರ ಹಾದಿಮನಿ, ರವೀಂದ್ರ ೂರ್ಪಡೆ, ಪ್ರವಿಣ ಗಂಗೋಳ, ಮಹೇಶ್ವರ ಹಿರೇಮಠ ಇತರರಿದ್ದರು. 
ಜಿಲ್ಲೆ

ಸಂಭಾವ್ಯ ಅತಿವೃಷ್ಟಿ ಸಮಸ್ಯೆ ನಿವಾರಣೆಗೆ ಮುಂದಾಗಲಿ

ಸೋಮಲಿಂಗ ತಳವಾರ

ಚನ್ನಮ್ಮನ ಕಿತ್ತೂರು: ಅತಿಯಾದ ಮಳೆಯಿಂದ ತಾಲೂಕಿನಲ್ಲಿ ನೆರೆ ಉಂಟಾದರೆ ಕೂಡಲೇ ತಾಲೂಕು ಮಟ್ಟದ ಅಧಿಕಾರಿಗಳು ಸೂಕ್ತ ಕ್ರಮ ಕೆಗೊಳ್ಳಬೇಕು ಹಾಗೂ ಸಾರ್ವಜನಿಕರ ತೊಂದರೆಗಳಿಗೂ ಕೂಡಲೇ ಸ್ಪಂದಿಸಬೇಕು. ಸಾರ್ವಜನಿಕರಿಂದ ಯಾವುದೇ ದೂರು ಬಂದರೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೆಗೊಳ್ಳಲಾಗುವುದು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಅಧಿಕಾರಿಗಳಿಗೆ ಖಡಕ್​ ಎಚ್ಚರಿಕೆ ನೀಡಿದರು.

ಪಟ್ಟಣದ ಆಡಳಿತ ಸೌಧದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಟಾಸ್ಕ್​ಪೋರ್ಸ್​ ಸಮಿತಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಮಲಪ್ರಭೆ ಮೆದುಂಬಿ ಹರಿಯುತ್ತಿದೆಯಾದರೂ ನೆರೆ ಸನ್ನಿವೇಶವಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಹೊಳೆ ಸಾಲಿನಲ್ಲಿರುವ ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗದಂತೆ ತಾಲೂಕಾಡಳಿತ ಕ್ರಮ ಕೆಗೊಳ್ಳಬೇಕು. ಮಳೆಯಿಂದ ವಿವಿಧೆಡೆ ಮನೆಗಳು ಕುಸಿದಿದ್ದು, ಅಧಿಕಾರಿಗಳು ತಾಲೂಕಾಡಳಿತಕ್ಕೆ ವಸ್ತುಸ್ಥಿತಿ ವರದಿ ನೀಡಬೇಕು. ಸರ್ಕಾರದಿಂದ ಪರಿಹಾರಧನ ದೊರಕಿಸಿಕೊಡಬೇಕು. ಡೆಂ ವಿಷಯದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೆಗೊಳ್ಳಬೇಕು. ಜತೆಗೆ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಅಂಗನವಾಡಿ ಮಕ್ಕಳು ಹಾಗೂ ವಿದ್ಯಾರ್ಥಿಗಳನ್ನು ಸೋರುವ, ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳಿದ್ದರೆ, ಅಲ್ಲಿ ಕೂಡಿಸಬಾರದು ಎಂದು ಸೂಚಿಸಿದರು.

ತಹಸೀಲ್ದಾರ್​ ರವೀಂದ್ರ ಹಾದಿಮನಿ ಮಾತನಾಡಿ, ಹೊಳೆ ಸಾಲಿನಲ್ಲಿರುವ ಎಲ್ಲ ಗ್ರಾಮಸ್ಥರಿಗೂ ನೆರೆಯ ಬಗ್ಗೆ ಈಗಾಗಲೇ ಎಚ್ಚರಿಸಲಾಗಿದೆ. ಒಟ್ಟು 32 ಕಾಳಜಿ ಕೇಂದ್ರ ತೆರೆಯಲಾಗಿದೆ. ಜಾನುವಾರು ರಣೆಗೂ ಒಟ್ಟು 44 ಕೇಂದ್ರಗಳನ್ನು ರಚಿಸಲಾಗಿದೆ. ಒಂದು ಬೋಟಿಂಗ್​ ವ್ಯವಸ್ಥೆ ಕೆಗೊಳ್ಳಲಾಗಿದೆ. ತಾಲೂಕಿನಲ್ಲಿ ಅಂದಾಜು 50 ಮನೆಗಳು ಬಿದ್ದಿರುವ ಮಾಹಿತಿ ಇದೆ ಎಂದರು.

ತಾಪಂ ಇಒ ರವೀಂದ್ರ ೂರ್ಪಡೆ, ಪಿಎಸ್​ಐ ಪ್ರವಿಣ ಗಂಗೋಳ, ಹೆಸ್ಕಾಂ ಎಇಇ ಮಹೇಶ್ವರ ಹಿರೇಮಠ, ಪಪಂ ಮುಖ್ಯಾಧಿಕಾರಿ ಎಂ.ವಿ.ಹಿರೇಮಠ, ಬಿಇಒ ತುಬಾಕಿ, ಸಂಜೀವ ಮಿರಜಕರ ವಿವಿಧ ತಾಲೂಕಾಧಿಕಾರಿಗಳು ಹಾಜರಿದ್ದರು.