Vector illustration in HD very easy to make edits. 
ಜಿಲ್ಲೆ

ಸಂಬಳ ಕೊಡದಿದ್ದಕ್ಕೆ ಕೊಲೆ

ಬೈಲಹೊಂಗಲ: ಬಾಕಿ ಸಂಬಳ ಕೊಡದ ಕಾರಣಕ್ಕೆ ಶುರುವಾದ ಜಗಳದಲ್ಲಿ ಗೌಂಡಿಯನ್ನು ಸಹ ಕೆಲಸಗಾರ ಕುಡಗೋಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬೈಲಹೊಂಗಲ ತಾಲೂಕಿನ ಗಿರಿಯಾಲ ಬಿ.ಕೆ. ಗ್ರಾಮದಲ್ಲಿ ಭಾನುವಾರ ನಡೆದಿದೆ.

ಮಂಜುನಾಥ ಗಿರಿಮಲ್ಲಪ್ಪ ಗೌಡರ (27) ಕೊಲೆಗೀಡಾದ ವ್ಯಕ್ತಿ. ಅದೇ ಗ್ರಾಮದ ದಯಾನಂದ ಗುಂಡ್ಲೂರ (23) ಕೊಲೆ ಆರೋಪಿ. ಮಂಜುನಾಥ ಮತ್ತು ದಯಾನಂದ ಇಬ್ಬರೂ ಗೌಂಡಿ ಕೆಲಸಕ್ಕೆ ಹೋಗುತ್ತಿದ್ದರು. ಗೌಂಡಿ ಕೆಲಸ ಸಂಬಳವನ್ನು ಮಂಜುನಾಥ ಬಾಕಿ ಇಟ್ಟುಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಶನಿವಾರ ರಾತ್ರಿ ಇಬ್ಬರ ಮಧ್ಯೆ ಜಗಳವಾಗಿತ್ತು.

ಭಾನುವಾರ ಬೆಳಗ್ಗೆ ಮಾತನಾಡುವುದಿದೆ ಬಾ ಎಂದು ಗ್ರಾಮದ ಹೊರಗೆ ಕರೆಯಿಸಿಕೊಂಡ ದಯಾನಂದ ಈ ಕೃತ್ಯ ಎಸಗಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬೈಲಹೊಂಗಲ ಠಾಣೆ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿದ್ದಾರೆ.