ಚಿತ್ತಾಪುರ: ಬ್ರಾಹ್ಮಣ ಸಮಾಜವನ್ನು ನಿಂದಿಸಿದ ಸಚಿವ ಡಿ. ಸುಧಾಕರ್ ಅವರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕು. ಅಲ್ಲದೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬ್ರಾಹ್ಮಣ ಸಮಾಜದ ತಾಲೂಕು ಅಧ್ಯಕ್ಷ ಗಿರೀಶ್ ಜಾನಿಬ್ ಒತ್ತಾಯಿಸಿದರು.
ತಹಸೀಲ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ಬ್ರಾಹ್ಮಣ ಸಮಾಜವನ್ನು ನಿಂದಿಸಿದ ಸಚಿವ ಡಿ. ಸುಧಾಕರ ಹಾಗೂ ಮಹೇಶಚಂದ್ರ ಗುರು ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ಬಳಿಕ ತಹಸೀಲ್ದಾರಗೆ ಮನವಿಪತ್ರ ಸಲ್ಲಿಸಲಾಯಿತು.
ಪ್ರಮುಖರಾದ ನಾಗರಾಜ ಕುಲಕರ್ಣಿ, ಪ್ರದೀಪ್ ಕುಲಕರ್ಣಿ, ಪವನ್ ಜೋಶಿ, ನರಸಿಂಹ ಕರದಾಳ್, ಆನಂದ ಪಟವಾರಿ, ಗುಂಡೆರಾವ್ ಸರಾಪ್, ಸಂತೋಷ್ ಕುಮಾರ್ ನಾಡಗೌಡ, ವಿಶ್ವನಾಥ್ ಅಫಜಲಪೂರಕರ್, ಶ್ರೀಹರಿ ಭಟ್, ಸಂಜೀವ ಕುಲಕರ್ಣಿ, ಸಂಜೀವ್ ಜಾನಿಬ್, ಅಂಬರೀಷ್ ಕುಲಕರ್ಣಿ, ದೇವಿದಾಸ್ ಕುಲಕರ್ಣಿ, ವೆಂಕಟೇಶ್ ಕುಲಕರ್ಣಿ, ಗೋಪಾಲರಾವ್ ಕುಲಕರ್ಣಿ, ನರಹರಿ ಕುಲಕರ್ಣಿ ಇತರರಿದ್ದರು.