ಜಿಲ್ಲೆ

ಸಂಪುಟ ಸಮಾಧಾನ ಇದೆ, ತೃಪ್ತಿ ಇಲ್ಲ

ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ನಡೆಸಿರುವ ಬಗ್ಗೆ ಸಮಾಧಾನವಿದ್ದು, ತೆಗೆದುಕೊಂಡ ನಿರ್ಣಯಗಳು ತೃಪ್ತಿಯಿಲ್ಲ ಎಂದು ಮುಖ್ಯಮಂತ್ರಿ ಸಲಹೆಗಾರ ಶಾಸಕ ಬಿ.ಆರ್.ಪಾಟೀಲ್ ಹೇಳಿದರು.
೩೭೧ (ಜೆ) ದಶಮಾನೋತ್ಸವ ಹಿನ್ನೆಯಲ್ಲಿ ತರಾತುರಿಯಲ್ಲಿ ಸಂಪುಟ ಸಭೆ ನಡೆದಿದ್ದರಿಂದ ಈ ಭಾಗದ ಅಭಿವೃದ್ಧಿಗೆ ಬೇಕಾದ ಕೊಡುಗೆಗಳು ನೀಡಲು ಆಗಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಮ್ಮ ಭಾಗದ ಜನರು ಬೆಂಗಳೂರಿಗೆ ಹೋಗಲು ಉತ್ತಮ ರಸ್ತೆಯಿಲ್ಲ. ಆದ್ದರಿಂದ ಬೀದರ್‌ನಿಂದ ಬೆಂಗಳೂರಿನವರೆಗೆ ನಾಲ್ಕು ಪಥದ ರಸ್ತೆ ನಿರ್ಮಿಸಬೇಕು. ರಸ್ತೆ ನಿರ್ಮಾಣದಿಂದ ದೇಶದ ಪ್ರಗತಿ ಆಗುತ್ತದೆ. ಸರ್ಕಾರಿ ನೌಕರರ ಬಡ್ತಿ ಸೇರಿ ವಿವಿಧ ವಿಷಯಗಳ ಕುರಿತು ಆಗುತ್ತಿರುವ ಅನ್ಯಾಯದ ವಿರುದ್ಧ ಮೇಲ್ಮನವಿ ಸಲ್ಲಿಸಲು ೩೭೧(ಜೆ)ಗಾಗಿ ಪ್ರತ್ಯೇಕ ಟ್ರಿಬ್ಯುನಲ್ ಪ್ರಾರಂಭಿಸಬೇಕಿತ್ತು ಎಂದರು.
ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಈ ಭಾಗದ ಜನಪ್ರತಿನಿಗಳಿಗೆ ತಿಳಿದಿದೆ. ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಮಾತ್ರ ನೋಡುತ್ತಾರೆ. ಸಂಪುಟ ಸಭೆ ಕುರಿತು ನಾನು ಮುಖ್ಯಮಂತ್ರಿಗೆ ಯಾವುದೇ ಸಲಹೆ ನೀಡಿಲ್ಲ. ಒಂದು ದಿನ ಮುನ್ನ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ಬಸವರಾಜ ದೇಶಮುಖ, ಲಕ್ಷö್ಮಣ ದಸ್ತಿ, ರಜಾಕ್ ಉಸ್ತಾದ್ ಸೇರಿ ಇಲ್ಲಿನ ಅಭಿವೃದ್ಧಿಗೆ ಪೂರಕ ನಿರ್ಣಯ ಕೈಗೊಂಡಿದ್ದು, ಪಟ್ಟಿ ನೀಡಲಾಗಿತ್ತು. ಅದರಲ್ಲಿ ಕೆಲ ವಿಷಯ ಪರಿಗಣಿಸಿದ್ದಾರೆ ಎಂದರು.
ಕಲ್ಯಾಣ ಕರ್ನಾಟಕದ ಸಾಕ್ಷರತೆ ಪ್ರಮಾಣ ಅತ್ಯಂತ ಕಡಿಮೆ ಇದ್ದು, ಅದಕ್ಕಾಗಿ ಶಿಕ್ಷಕರ ನೇಮಕ ನಡೆಯಬೇಕು. ಗುಲ್ಬರ್ಗ ವಿವಿಯ ಶೇ.೮೦ ಹುದ್ದೆ ಖಾಲಿ ಇವೆ. ಶೈಕ್ಷಣಿಕವಾಗಿ ಪ್ರಮುಖ ನಿರ್ಧಾರ ಕೈಗೊಳ್ಳಲು ಹೇಳಿz್ದೆÃವು. ಆದರೆ ಸಂಪುಟದಲ್ಲಿ ಸ್ಪಷ್ಟತೆ ನೀಡಿಲ್ಲ. ೨೮ ಸಾವಿರ ಭರ್ತಿಯ ನಿರ್ಣಯ ಮುಂದಿನ ಸಂಪುಟ ಸಭೆಯಲ್ಲಿ ಕೈಗೊಳ್ಳಬೇಕು. ಶಾಲೆ, ಕಾಲೇಜು ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದರು.