ಜಿಲ್ಲೆ

ಸಂಪುಟ ವಿಸ್ತರಣೆ ಚರ್ಚೆಯಿಂದ ಗೊಂದಲ ಸೃಷ್ಟಿ : ಮುಖ್ಯಮಂತ್ರಿಗೆ ಎಚ್.ಡಿ.ಕುಮಾರಸ್ವಾಮಿ ಸಲಹೆ

ಮಾಗಡಿ: ಸಚಿವ ಸಂಪುಟ ವಿಸ್ತರಣೆ ಚರ್ಚೆಯಿಂದಾಗಿ ಆಡಳಿತದ ಮೇಲಾಗುವ ಪರಿಣಾಮವನ್ನು ಬಿಜೆಪಿ ನಾಯಕರು ಸರಿಪಡಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.

ಪಟ್ಟಣದ ಚನ್ನಪ್ಪ ಬಡಾವಣೆಯ ಚೌಡೇಶ್ವರಿ ದೇವಾಲಯದ ಮಹಾ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿ, ಸಂಪುಟ ವಿಸ್ತರಣೆ ಬಗ್ಗೆ ಮಾದ್ಯಮಗಳಲ್ಲಿ ಗಮನಿಸಿದ್ದೇನೆ. ಬಿಜೆಪಿ ಕೆಲ ಶಾಸಕರಲ್ಲಿ ಸಂಪುಟ ಪುನರ್ ರಚನೆಯಾಗಬೇಕು, ಕೆಲವರನ್ನು ಬದಲಾಯಿಸಬೇಕು ಎಂದು ಚರ್ಚೆ ನಡೆಯುತ್ತಿದೆ. ಅದು ಅವರ ಪಕ್ಷಕ್ಕೆ ಸೇರಿದ ವಿಚಾರವಾದರೂ ಇಂದಿನ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಗೊಂದಲ ಉಂಟುವಾಡುತ್ತಾ

ಆಡಳಿತದ ಮೇಲಾಗುವ ಪರಿಣಾಮಗಳನ್ನು ಶಿಸ್ತಿನ ಪಕ್ಷ ಎನ್ನುವ ಬಿಜೆಪಿ ಸರಿಪಡಿಸಿಕೊಳ್ಳಬೇಕೆಂಬುದು ನನ್ನ ಅಭಿಪ್ರಾಯವಾಗಿದೆ ಎಂದರು.

ಮಾಜಿ ಸಚಿವ ಎಚ್.ಎಂ.ರೇವಣ್ಣ ವಾತನಾಡಿ, ಒಂದೊಂದು ಬಡಾವಣೆ, ಗ್ರಾಮಗಳಲ್ಲಿ ದೇವಾಲಯಗಳ ಅವಶ್ಯಕತೆಯಿದೆ, ದೇವಾಲಯ ಕಟ್ಟುವುದು ಎಷ್ಟು ಮುಖ್ಯವೋ ಅದೇ ರೀತಿ ಪ್ರತಿನಿತ್ಯ ಪೂಜಾ ಕೈಂಕರ್ಯ ನಡೆಸುವುದೂ ಅಷ್ಟೇ ಮುಖ್ಯ ಎಂದರು.

ಪುರಸಭೆಗೆ ಮುಖ್ಯಾಧಿಕಾರಿ ಭಾರತಿ ಅಧಿಕಾರ ವಹಿಸಿಕೊಂಡ ನಂತರ ಎಷ್ಟು ದಿನ ಸಾರ್ವಜನಿಕರಿಗೆ ಸಿಕ್ಕಿದ್ದಾರೆ. ಮುಖ್ಯಾಧಿಕಾರಿಗಳು ಕಚೇರಿಯಲ್ಲಿಲ್ಲ ಎಂದ ಮೇಲೆ ಕೆಲಸಗಳು ನಡೆಯುವುದಾದರೂ ಹೇಗೆ. ಪುರಸಭೆ ಸಾವಾನ್ಯ ಸಭೆಯೇ ನಡೆದಿಲ್ಲ ಎಂದರೆ ಪುರಸಭಾ ಅಧ್ಯಕ್ಷರ ಬದ್ಧತೆ ಏನೆಂದು ತಿಳಿಯುತ್ತದೆ ಎಂದು ಪುರಸಭೆ ಕಾರ್ಯ ವೈಖರಿ ಬಗ್ಗೆ ಮಾಜಿ ಸಚಿವ ಎಚ್.ಎಂ. ರೇವಣ್ಣ ಲೇವಡಿ ವಾಡಿದರು.

ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಪುರಸಭೆಯಲ್ಲಿ ಏನು ನಡೆಯುತ್ತಿದೆ ಎಂದು ಮಾಧ್ಯಮಗಳು ಬೆಳಕು ಚೆಲ್ಲಬೇಕು. ಅದೇ ರೀತಿ ಆಡಳಿತ ನಡೆಸುವವರು ಹಿಡಿತವಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಕರೊನಾ ನಿಯಮ ದೂರ: ತಾಲೂಕಿನಲ್ಲಿ ದಿನೇದಿನೆ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕ ಸಭೆ, ಸಮಾರಂಭಗಳನ್ನು ನಡೆಸಲು ನಿಷೇಧ ಹೇರಿದರೂ ದೇವಾಲಯದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಯಾರೊಬ್ಬರೂ ವಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸೇರಿದ್ದರು. ತಾಲೂಕು ಆಡಳಿತ ಕಣ್ಣುಮುಚ್ಚಿ ಕುಳಿತಿದ್ದು, ಸಾರ್ವಜನಿಕರ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಕರೊನಾ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸ್ಥಳಿಯ ಆಡಳಿತಕ್ಕೆ ಸೂಚಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಗಿ ಖರೀದಿ ಸ್ಥಗಿತಗೊಂಡಿದ್ದು ರೈತರಿಗೆ ಸಮಸ್ಯೆಯಾಗಿದೆ, ಕೂಡಲೇ ಖರೀದಿ ಆರಂಭಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುವಾರಸ್ವಾಮಿ ಅವರಿಗೆ ರೈತ ಸಂದ ಜಿಲ್ಲಾ ಮುಖಂಡ ಬೈರೇಗೌಡ ಮನವಿ ವಾಡಿದರು.

ಶಾಸಕ ಎ.ಮಂಜುನಾಥ್, ಜಿಪಂ ವಾಜಿ ಅಧ್ಯಕ್ಷ ಎಂ.ಕೆ.ಧನಂಜಯ, ಪುರಸಭೆ ಅಧ್ಯಕ್ಷೆ ವಿಜಯಾ ರೂಪೇಶ್, ಸದಸ್ಯರಾದ ಎಂ.ಎನ್.ಮಂಜುನಾಥ್, ಹೇಮಲತಾ, ಶಿವರುದ್ರಮ್ಮ ವಿಜಯ್ ಕುವಾರ್, ಸಿವಕುಮಾರ್, ನಾಗರತ್ನಮ್ಮ ಮತ್ತಿತರರು ಇದ್ದರು.