ಕಲಬುರಗಿ: 2023 ಫೆ.1ರ ರಾಜ್ಯ ಸರ್ಕಾರದ ಸುತ್ತೋಲೆ ನಿಯಮವನ್ನು ರಾಜ್ಯ ಸರ್ಕಾರದ ಎಲ್ಲ ನೇಮಕಗಳಲ್ಲಿ ಪರಿಗಣಿಸಬೇಕು, ಅದರಲ್ಲಿನ ನ್ಯೂನ್ಯತೆ ಸರಿಮಾಡುವ ನಿಟ್ಟಿನಲ್ಲಿ ಸೆ.೨೭ರಂದು ನಡೆಯಲಿರುವ ೩೭೧ (ಜೆ) ಉಪ ಸಮಿತಿ ಸಭೆಯಲ್ಲಿ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷö್ಮಣ ದಸ್ತಿ ಒತ್ತಾಯಿಸಿದರು.
೩೭೧(ಜೆ) ಜಾರಿ ಆದಾಗಿನಿಂದ ಅನ್ಯಾಯ ಮುಂದುವರಿದೆ. ಲೋಕನಾಥ ಎಂಬಾತ ರಾಜ್ಯ ಮಟ್ಟದ ಕಚೇರಿ ಎಂದು ಹೇಳಿ ಇನ್ನುಳಿದ ಜಿಲ್ಲೆಗಳಲ್ಲಿ ಮೀಸಲು ಸಿಗದಂತೆ ಮಾಡಿದ. ಇದುವರೆಗೆ ೧೦ ಸುತ್ತೋಲೆ ಹೊರಡಿಸಿ, ಗೊಂದಲ ಸೃಷ್ಟಿಸಲಾಗುತ್ತಿದೆ. ಬಿಜೆಪಿ ಸರ್ಕಾರವಿದ್ದಾಗ ೨೦೨೩ ೆ.೧ ರಂದು ಹೊರಡಿಸಿದ ಸುತ್ತೋಲೆಯಂತೆ ಪಿಎಸ್‌ಐ ಸೇರಿ ಎಲ್ಲ ನೇಮಕ ನಡೆಸುಂತೆ ಸಂಪುಟ ಉಪ ಸಮಿತಿ ಆದೇಶಿಸಬೇಕು. ಅದರಲ್ಲೂ ಇರುವ ನ್ಯೂನ್ಯತೆ ಸರಿಪಡಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಲ್ಯಾಣದ ಇತಿಹಾಸ ಪುಸ್ತಕ ಶೀಘ್ರ: ಕಲ್ಯಾಣ ಕರ್ನಾಟಕ ಇತಿಹಾಸ ರಚನಾ ಸಮಿತಿಯಿಂದ ಪುಸ್ತಕ ಹೊರ ತರುವ ಯೋಜನೆಗೆ ಕೆಕೆಆರ್‌ಡಿಬಿ ನೆರವು ನೀಡುತ್ತಿದೆ. ವಿಮೋಚನೆ ಸಮಗ್ರ ಹೋರಾಟ ಕುರಿತು ೧೦೦ ಪುಟಗಳ ಕನ್ನಡ ಮತ್ತು ಇಂಗ್ಲಿಷ್ ಪುಸ್ತಕ ರಚಿಸಿ, ಲೋಕಾರ್ಪಣೆ ಮಾಡಲಾಗುವುದು ಎಂದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಗೌರವಾಧ್ಯಕ್ಷ ಬಸವರಾಜ ದೇಶಮುಖ, ಡಾ.ಮಾಜಿದ ದಾಗಿ, ಪ್ರೊ.ಬಸವರಾಜ ಕುಮನೂರು ಇತರರಿದ್ದರು.