ಜಿಲ್ಲೆ

ಸಂತ್ರಸ್ಥ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಿ

ಬಳ್ಳಾರಿ : ಹಾಸನದ ಲೈಂಗಿಕ ಹಗರಣವನ್ನು ರಾಜಕೀಯಗೊಳಿಸದೆ ಸಂತ್ರಸ್ಥ ಹೆಣ್ಣುಮಕ್ಕಳಿಗೆ ನ್ಯಾಯ ನೀಡಿ ಎಂದು ಆಗ್ರಹಿಸಿ ಎಐಎಂಎಸ್‌ಎಸ್ ಸಂಘಟನೆಯು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿದರು.
ಎಐಎಂಎಸ್‌ಎಸ್ ಸಂಘಟನೆ ಜಿಲ್ಲಾದ್ಯಕ್ಷೆ ಈಶ್ವರಿ ಮಾತನಾಡಿ, ಹಾಸನದಲ್ಲಿ ಪ್ರಭಾವಿ ರಾಜಕಾರಣಿ ಕುಟುಂಬದ ಸದಸ್ಯರು ಹಲವಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯವನ್ನು ಸಂಘಟನೆ ಖಂಡಿಸಿದೆ. ಲೈಂಗಿಕ ದೌರ್ಜನ್ಯದ ಸರಣಿ ದೃಶ್ಯಾವಳಿಗಳಿರುವ ಅಶ್ಲೀಲ ಪೆನ್ ಡ್ರೈವ್‌ಗಳು ಹಾಸನದ ಹಾದಿ ಬೀದಿಗಳಲ್ಲಿ ಚೆಲ್ಲಲಾಗಿದೆ ಎನ್ನುವ ವಿಷಯ ಇಡಿ ರಾಜ್ಯದಲ್ಲೇ ತಲ್ಲಣ ಉಂಟು ಮಾಡಿದೆ. ಮನೆ ಕೆಲಸದಿಂದ ಹಿಡಿದು, ಜಿಪಂ ಸದಸ್ಯೆ ಹಾಗೂ ಉನ್ನತ ಹುದ್ದೆಯಲ್ಲಿರುವ ರವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ಎಷ್ಟೇ ಪ್ರಭಾವಿತರಾಗಿದ್ದರು, ರಾಜ್ಯ ಸರ್ಕಾರ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷಪಕ್ಷಪಾತವಾಗಿ ತನಿಖೆ ನಡೆಸಿ ಸಂತ್ರಸ್ಥೆಯರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.