ಜಿಲ್ಲೆ

ಸಂತ್ರಸ್ತ ಪರಿವಾರಕ್ಕೆ ಆರ್ಥಿಕ ನೆರವು

ಬೀದರ್: ಹಿಪ್ಪಳಗಾಂವ್ ಗ್ರಾಮದಲ್ಲಿ ಈಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಶಿವಕುಮಾರ ಮನೋಹರ ಪರಿವಾರಕ್ಕೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಅವರು ಸಾಂತ್ವನ ಹೇಳಿ ವೈಯುಕ್ತಿಕ ನೆರವು ನೀಡಿದ್ದಾರೆ.

ದಿ.ಶಿವಕುಮಾರ ಮನೆಗೆ ಭೇಟಿ ನೀಡಿದ ಸೂರ್ಯಕಾಂತ ಅವರು ದು:ಖದಲ್ಲಿದ್ದ ಪರಿವಾರದ ಸದಸ್ಯರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ತಾಲೂಕು ಬಿಜೆಪಿ ಅಧ್ಯಕ್ಷ ರಾಜೇಂದ್ರ ಪೂಜಾರಿ, ಪ್ರಮುಖರಾದ ಫರ್ನಾಂಡಿಸ್ ಹಿಪ್ಪಳಗಾಂವ್, ವಿಜಯಕುಮಾರ ಹಿಪ್ಪಳಗಾಂವ್, ರಾಮಶೆಟ್ಟಿ ಬಿರಾದಾರ್, ಉದಯಕುಮಾರ ಬಿರಾದಾರ್, ಶಂಕರ ತುಜಾಪುರ, ಲಾಲಪ್ಪ, ವಿಜಯಕುಮಾರ ಮತ್ತಿತರರು ಇದ್ದರು.

ನೆರವು: ಅನಾರೋಗ್ಯದಿಂದಾಗಿ ಮೃತಪಟ್ಟ ದೇವಿದಾಸ ಬಾಬನೂರೆ ಅವರ ನಿವಾಸಕ್ಕೂ ಸೂರ್ಯಕಾಂತ ನಾಗಮಾರಪಳ್ಳಿ ಭೇಟಿ ನೀಡಿದ್ದರು. ಸಾಂತ್ವನ ಹೇಳಿ, ವೈಯುಕ್ತಿಕವಾಗಿ ಆರ್ಥಿಕ ನೆರವು ನೀಡಿದರು. ಪಲರಾಜ್, ಶಿವಣ್ಣ ಹಿಪ್ಪಳಗಾಂವ್, ವೀರಶೆಟ್ಟಿ ಪಾಟೀಲ್ ಮತ್ತಿತರ ಗಣ್ಯರು ಜೊತೆಯಲ್ಲಿದ್ದರು.