ಜಿಲ್ಲೆ

ಸಂತೋಷ ಸಾಲಿ ಕಣ್ಣುಗಳ ದಾನ

ಕಲಬುರಗಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿ¯್ಲÁ ಶಾಖೆಯಿಂದ ಶನಿವಾರ ಹೃದಯಾಘಾತದಿಂದ ನಿಧನರಾದ ಸಿz್ದÉÃಶ್ವರ ನಗರದ ಸಂತೋಷ ಸಾಲಿ (೪೦) ಅವರ ನೇತ್ರಗಳನ್ನು ಬಸವೇಶ್ವರ ಆಸ್ಪತ್ರೆಯ ನೇತ್ರದಾನ ಬ್ಯಾಂಕ್‌ಗೆ ಮಾಡಿಸಲಾಯಿತು. ಸಾಲಿ ಕುಟುಂಬದ ಸದಸ್ಯರನ್ನು ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ರವೀಂದ್ರ ಶಾಬಾದಿ ಭೇಟಿ ಮಾಡಿ ನೇತ್ರದಾನದ ಮಹತ್ವದ ಕುರಿತು ಮನವರಿಕೆ ಮಾಡಿ, ಮನವೊಲಿಸಿದರು. ಕುಟುಂಬದ ಮುಖ್ಯಸ್ಥ ಬಸವರಾಜ ಸಾಲಿ ಒಪ್ಪಿಗೆ ನೀಡಿದರು. ಕಣ್ಣುಗಳು ಮಣ್ಣಲ್ಲಿ ಮಣ್ಣಾಗದೆ ಇಬ್ಬರ ಅಂಧರ ಜೀವನದಲ್ಲಿ ಬೆಳಕು ಮೂಡಿಸುವಲ್ಲಿ ಸಹಕಾರಿಯಾಗಿವೆ ಎಂದು ಹೇಳಿಕೆ ಒಪ್ಪಿಗೆ ನೀಡಿದರು. ಬಸವೇಶ್ವರ ಆಸ್ಪತ್ರೆಯ ನೇತ್ರ ತಜ್ಞೆ ಡಾ.ಮಂಜುಳಾ ಮಂಗಾಣೆ ಮತ್ತು ಡಾ.ವೀರೇಶ ಕೋರವಾರ ನೇತೃತ್ವದ ತಂಡ ದಾನಿಯ ನೇತ್ರಗಳನ್ನು ಶಸ್ತç ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಪೂರ್ಣಗೊಳಿಸಿತು.