ಕಲಬುರಗಿ: ಆಳಂದ ತಾಲೂಕಿನ ಕಡಗಂಚಿಯ ವಾರದ ಸಂತೆ ಕಟ್ಟೆ ಆವರಣದಲ್ಲಿನ ಸಂಗೋಳ್ಳಿ ರಾಯಣ್ಣ ಪ್ರತಿಮೆಗೆ ಮಂಗಳವಾರ ಹಾರ ಹಾಕಿ ನಮಿಸಿದ ಆರ್.ಅಶೋಕ್, ಸಂತೆಯಲ್ಲಿ ಮಾರುಕಟ್ಟೆಗೆ ಬಂದಿದ್ದ ರೈತರೊಂದಿಗೆ ಚರ್ಚೆ ನಡೆಸಿದರು.
ಮಾರುಕಟ್ಟೆ ವ್ಯವಸ್ಥೆ ಸರಿಯಾಗಿ ಮಾಡ್ರಿ, ಊಟಕ್ಕೂ ಆಗುವಷ್ಟು ಬೆಲೆ ಸಿಗ್ತಿಲ್ಲ ಎಂದು ಮಾರಾಟಗಾರರು ಅಳಲು ತೋಡಿಕೊಂಡರು. ಸೀತಾಫಲ ಹಣ್ಣು ಮಾರುವ ಮಹಿಳೆ ಮಾತನಾಡಿ, ಮಳೆ ಇಲ್ಲದಕ್ಕೆ ರೈತರು ಸಂತೆಗೆ ಬರ್ತಿಲ್ಲ. ಏನಾದ್ರು ಮಾಡಿ ರೈತರಿಗೆ ಅನುಕೂಲ ಮಾಡ್ರಿ ಸಾಹೇಬ್ರೆ. ಇಲ್ಲಾಂದ್ರ ಎಲ್ಲರ ಬದುಕು ಹಾಳ ಆಗೈತಿ ಎಂದು ಅಶೋಕ್ ಗಮನ ಸೆಳೆದರು. ಕಡಗಂಚಿಯ ಲೋಕಲ್ ಹೊಟೇಲ್‌ನಲ್ಲಿ ಸುಸಲಾ, ಚಾ ಸೇವಿಸಿದ ಅಶೋಕ್ ವ್ಯಾಪಾರ ವಹಿವಾಟಿನ ಬಗ್ಗೆ ಕೇಳಿದರು.