ಬಾಗಲಕೋಟೆ: ಜಿಲ್ಲೆಯ ಮುಧೋಳ, ಬೀಳಗಿ, ಮಹಾಲಿಂಗಪುರ ಮತ್ತು ತೇರದಾಳದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಸೆ.3 ರಂದು ಉಪ ಚುನಾವಣೆ ಜರುಗಲಿದ್ದು, ಮತದಾನ ದಿನದಂದು ಉಪ ಚುನಾವಣೆ ನಡೆಯುವ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಾಗೂ ಮತದಾನಕ್ಕೆ ಅನುಕೂಲವಾಗುವ ಹಿತದೃಷ್ಟಿಯಿಂದ ಹಬ್ಬ, ಸಂತೆ, ಜಾತ್ರೆ, ದನಗಳ ಜಾತ್ರೆ, ಉತ್ಸವಗಳನ್ನು ನಿಷೇಧಿ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ಮದ್ಯ ಮಾರಾಟ, ಸಾಗಣೆಗೆ ತಡೆ
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸೆ.2ರ ಬೆಳಗ್ಗೆ 6 ರಿಂದ ಸೆ.3 ರ ಮಧ್ಯರಾತ್ರಿ 12 ಗಂಟೆವರೆಗೆ ಮುಧೋಳ ನಗರಸಭೆ ವ್ಯಾಪ್ತಿ, ಬೀಳಗಿ ಪಪಂ ವ್ಯಾಪ್ತಿ, ಮಹಾಲಿಂಗಪುರ ಮತ್ತು ತೇರದಾಳದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಮಾತ್ರ ಬಿಯರ್, ಬ್ರಾೃಂಡಿ ಹಾಗೂ ಲಿಕ್ಕರ್ ಮಾರಾಟ ಸಂಗ್ರಹಣೆ ಹಾಗೂ ಸಾಗಣೆೆಯನ್ನು ನಿಷೇಧಿಸಲಾಗಿದೆ.
ಉಪ ಚುನಾವಣೆ ಪ್ರತಿಬಂಧಕಾಜ್ಞೆ ಜಾರಿ
ಉಪ ಚುನಾವಣೆ ಮತದಾನ ನಡೆಯುವ ಪ್ರದೇಶದಲ್ಲಿ 5 ವ್ಯಕ್ತಿಗಳಿಗಿಂತ ಹೆಚ್ಚಿನ ಜನರು ಜೊತೆಗೂಡಿ, ಗುಂಪಾಗಿ ಸಂಚರಿಸುವಂತಿಲ್ಲ. ಮತದಾನ ನಡೆಯುವ ಕೇಂದ್ರದ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಬೆಳಗ್ಗೆ 6 ರಿಂದ ಮತದಾನ ಮುಕ್ತಾಯವಾಗುವವರೆಗೆ ಸಿಆರ್‌ಪಿಸಿ 1973 ಕಲಂ 144 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35 ರಡಿ ಪ್ರತಿಬಂಧಕಾಜ್ಞೆಯನ್ನು ಜಾರಿ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.