ಚಿಕ್ಕಮಗಳೂರು: ಪ್ರಪಂಚದಲ್ಲಿ ಹಲವಾರು ಯುದ್ದಗಳು ನಡೆದಿವೆ. ಆದರೆ ಆತ್ಮ ಗೌರವಕ್ಕೆ, ಸ್ವಾಭಿಮಾನಕ್ಕೆ ಮತ್ತು ಸಮಾನತೆಗಾಗಿ ನಡೆದಿರುವಂತಹ ಯುದ್ದವೆಂದರೆ ಭೀಮಾ ಕೋರೆಗಾಂವ್ ಯುದ್ದ ಎಂದು ಪ್ರಾಧ್ಯಾಪಕ ಮಲ್ಲೇನಹಳ್ಳಿ ರಮೇಶ್ ಬಣ್ಣಿಸಿದರು.
ತಾಲೂಕಿನ ಕಾಮನದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತವೇರಿ ಗ್ರಾಮದಲ್ಲಿ ವಿದ್ಯಾನಗರ ಬಡಾವಣೆಯ ಛಲವಾದಿ ಸಮುದಾಯದ ವತಿಯಿಂದ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಭಾರತದ ಇತಿಹಾಸದಲ್ಲಿ ಮಹಾರಾಷ್ಟçದ ಅಸ್ಪಶ್ಯ ಸಮುದಾಯಕ್ಕೆ ಸೇರಿದ್ದ ಮಹಾರ್ ಸಮುದಾಯದ ವಿರುದ್ದ ವೈರುತ್ವ ದಾಖಲು ಮಾಡಲು ಇತಿಹಾಸ ಬರೆಯಲಿಲ್ಲ. ಮನುವಾದಿಗಳು, ಅಸ್ಪಶ್ಯರು ಮತ್ತು ಶೂದ್ರರು ಆಯುಧಗಳನ್ನು ಹಿಡಿಯಲು ನಿಷೇಧ ಹೇರಿದ್ದರು. ಅಂತಹ ಕಾಲಘಟ್ಟದಲ್ಲಿ ೧೮೧೭ ಡಿಸೆಂಬರ್ ೩೧ ರಂದು ಇಂತಹ ವೀರತ್ವದ ಘಟನೆ ನಡೆದಿರುವುದು ಇತಿಹಾಸ ಎಂದರು.
ಶಿವಾಜಿ ನಂತರ ಆಡಳಿತದಲ್ಲಾದ ಬದಲಾವಣೆಗಳಲ್ಲಿ ಅಲ್ಲಿನ ಬ್ರಾಹ್ಮಣ ಪೇಶ್ವೆಗಳು ಮನು ಧರ್ಮ ಶಾಸ್ತçವನ್ನು ಕಟ್ಟುನಿಟ್ಟಾಗಿ ಮಾಡಿ ಕಾನೂನು ಜಾರಿಗೊಳಿಸಿದ್ದರು. ಮನುಷ್ಯರನ್ನು ಮನುಷ್ಯರನ್ನಾಗಿ ನೋಡದೆ, ಅದರಲ್ಲೂ ವಿಶೇಷವಾಗಿ ಮಹಾರ್ ಸಮುದಾಯವನ್ನು ಎಷ್ಟು ಹೀನಾಯವಾಗಿ ಶೋಷಣೆ ಮಾಡುತ್ತಿದ್ದರೆಂದರೆ ಗ್ರಾಮದ ಒಳಗೆ ಅಸ್ಪಶ್ಯರು ಬಾರದಂತೆ ತಡೆಯೊಡ್ಡುತ್ತಿದ್ದರು ಎಂದು ವಿಷಾದ ವ್ಯಕ್ತಪಡಿಸಿದರು.
ಅನಿಷ್ಟ ಪದ್ಧತಿಯನ್ನು ಬದಲಾಯಿಸಬೇಕು ಎಂಬುದನ್ನು ಸಿದ್ಧನಾಥ ಅವರು ಎರಡನೇ ಬಾಜಿರಾಯನ ಬಳಿ ನಮಗೂ ನಿಮ್ಮ ಹಾಗೆ ಬದುಕಲು ಅವಕಾಶ ಕೊಡಿ ಎಂದು ಅಂಗಲಾಚಿದಾಗ ಬಾಜಿರಾಯ ಒಪ್ಪುವುದಿಲ್ಲ. ಸೈನ್ಯದ ಮುಖಂಡ ಸಿದ್ದನಾಥ ತಮ್ಮ ೫೦೦ ಮಹಾರ್ ಸೈನಿಕರೊಂದಿಗೆ ೨೮ ಸಾವಿರ ಬಾಜಿರಾಯನ ಸೈನ್ಯದೊಂದಿಗೆ ಹೋರಾಡಿ ವಿಜಯವನ್ನು ಕೊಟ್ಟಿರುವ ಸ್ಥಳ ಭೀಮಾ ನದಿ ತೀರದ ಭೀಮಾ ಕೋರೆಗಾಂವ್ ಗ್ರಾಮ. ಅಂದಿನಿAದ ಇಲ್ಲಿಯವರೆಗೆ ಬೀಮಾ ಕೋರೆಗಾಂವ್ ವಿಜಯೋತ್ಸವವನ್ನು ಜನವರಿ ೧ ರಂದು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಲಂಡನ್‌ನಿAದ ಬಂದು ನಮ್ಮ ಸಮುದಾಯ ಜನ ಆತ್ಮ ಗೌರವಕ್ಕಾಗಿ ಮಾಡಿದ ತ್ಯಾಗ ಮತ್ತು ಬಲಿದಾನದ ಸಂಕೇತ ವಿಜಯೋತ್ಸವ ಸ್ತಂಭ ಎಂದು ಪ್ರತಿ ವರ್ಷ ಕುಟುಂಬ ಸಮೇತರಾಗಿ ಭೀಮಾ ಕೋರೆಗಾಂವ್ ಇರುವ ಸ್ತಂಭಕ್ಕೆ ಭೇಟಿ ನೀಡಿ ಅಲ್ಲಿನ ವೀರರನ್ನು ಸ್ಮರಿಸಿ, ಗೌರವ ಕೊಡುವ ಮೂಲಕ ಇತಿಹಾಸವನ್ನು ಪರಿಚಯಿಸುವ ಕೆಲಸ ಮಾಡಿದ್ದರು ಎಂದರು.
ಕಾರ್ಯಕ್ರಮದಲ್ಲಿ ಛಲವಾದಿ ಸಮುದಾಯದ ಹಿರಿಯರಾದ ಮರಿಯಪ್ಪ, ಮಂಜುನಾಥ್, ರಾಜು, ಮುಖಂಡರಾದ ಗಂಗಪ್ಪ, ಚನ್ನಪ್ಪ, ಅನಿಲ್ ಸಿ, ನಾಗೇಶ್, ಪ್ರದೀಪ್, ವಿದ್ಯಾನಗರ ಬಾಯ್ಸ್ ಮುಖಂಡರು, ಮಹಿಳೆಯರು, ಮಕ್ಕಳು, ಗ್ರಾಮಸ್ಥರು, ವಿವಿಧ ಸಮುದಾಯಗಳ ಮುಖಂಡರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ಗ್ರಾಮದ ಬೈಪಾಸ್ ರಸ್ತೆಯಿಂದ ಪ್ರಮುಖ ಬೀದಿಯಲ್ಲಿ ಜಯ ಘೋಷಗಳನ್ನು ಕೂಗುತ್ತಾ, ಪಟಾಕಿ ಸಿಡಿಸಿ, ಸಿಹಿ ಹಂಚಿ ಮೆರವಣಿಗೆ ಮೂಲಕ ಸಾಮೂಹಿಕವಾಗಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.