ಶಹಾಬಾದ್: ಶಿಕ್ಷಕರು ಹಣದ ಕಡೆ ನೋಡದೆ ವಿದ್ಯಾರ್ಥಿಗಳನ್ನು ಓದಿನತ್ತ ಸೆಳೆಯುವ ಕೆಲಸ ಮಾಡಬೇಕು. ಮಾನಸಿಕವಾಗಿ ನಾವೆಲ್ಲರೂ ಸಂತರಾಗಿ ಶಿಕ್ಷಣವನ್ನು ದಾನ ಮಾಡಬೇಕು ಎಂದು ನ್ಯಾಕ್ ಸಮಿತಿ ಅಧ್ಯಕ್ಷ ಕರುಣೇಶ ಸಕ್ಸೇನಾ ಹೇಳಿದರು.
ಎಸ್.ಎಸ್. ಮರಗೋಳ ಮಹಾವಿದ್ಯಾಲಯಕ್ಕೆ ಗುರುವಾರ ಭೇಟಿ ನೀಡಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಜತೆ ಸಾಕಷ್ಟು ವಿಷಯ ಚರ್ಚಿಸಿದ ಅವರು, ಕೋವಿಡ್‌ನಿಂದಾಗಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡಲಾಯಿತು. ಆದರೆ ಇದು ಪರಿಣಾಮಕಾರಿ ಬೋಧನೆ ಕ್ರಮವಲ್ಲ. ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಬಂದರೆ ಮಾತ್ರ ಸಮರ್ಪಕ ಓದುತ್ತಾರೆ ಎಂಬುದು ಸಾಕಷ್ಟು ಬಾರಿ ರುಜುವಾಗಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕಂಪ್ಯೂಟರ್ ಜ್ಞಾನ ನೀಡಲು ಶಿಕ್ಷಣ ಸಂಸ್ಥೆಗಳು ಗಮನಹರಿಸಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಉಪನ್ಯಾಸಕ ಡಾ.ಶಂಕರ ಸೋಮಯಾಜಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳಿಂದ ಕಾಲೇಜಿಗೆ ಶುದ್ಧ ಕುಡಿಯುವ ನೀರಿನ ಘಟಕ, ಗ್ರಂಥಾಲಯಕ್ಕೆ ಮೇಜು, ಆಟದ ಮೈದಾನಕ್ಕೆ ಸಮರ್ಪಕ ರಸ್ತೆ, ಮೈದಾನದ ಸುತ್ತ ಗಿಡ ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಡಾ.ಚೈತಾಲಿ ಚಕ್ರಬರ್ತಿ, ಡಾ.ಸಿ.ಎನ್. ನಾಯಕ, ಹಳೆಯ ವಿದ್ಯಾರ್ಥಿಗಳಾದ ರೆಡ್‌ಸನ್, ಸಾನಿಯಾ, ಜಗನ್ನಾಥ ಎಸ್.ಎಚ್., ವಾಸುದೇವ ಚವ್ಹಾಣ್, ಕೆ.ರಮೇಶ ಭಟ್ಟ ಮಾತನಾಡಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಪದವಿ ಕಾಲೇಜುಗಳ ಸಂಯೋಜಕ ಸೋಮನಾಥ ನಿಗ್ಗುಡಗಿ, ವಿಶೇಷಾಧಿಕಾರಿ ಎಸ್.ಕೆ. ಸಾತನೂರ, ಪ್ರಾಚಾರ್ಯ ಕೆ.ಬಿ. ಬಿಲ್ಲವ್, ನ್ಯಾಕ್ ಸಂಯೋಜಕ ಜಿ.ಆರ್. ಸ್ಥಾವರಮಠ, ಡಾ.ಬಸವರಾಜ ಹಿರೇಮಠ, ಡಾ.ವೆಂಕಟೇಶ ಪೂಜಾರಿ, ಪ್ರಮುಖರಾದ ಗುರುಲಿಂಗಪ್ಪ ತುಂಗಳ, ಗಂಗಾಧರ, ರಾಜಶೇಖರ, ಸರಿತಾ, ನಾಗಲಕ್ಷ್ಮೀ, ರಾಜಶೇಖರ ದೇವರಮನಿ, ಬಸವರಾಜ ಮಯೂರ, ಸುಭಾಶಚಂದ್ರ ಇಂಗಿನಶೆಟ್ಟಿ, ಶರಣಗೌಡ ಪಾಟೀಲ್, ರಾಮಣ್ಣ ಇಬ್ರಾಹಿಂಪುರ, ಶಿವಲಿಂಗಪ್ಪ ಕುಂಬಾರ, ಸುಮಯ್ಯ ಬೇಗಂ, ನಫೀಜಾ ಇತರರಿದ್ದರು.