ಔರಾದ್: ಸಂತಪುರ ಗ್ರಾಪಂ ನೂತನ ಅಧ್ಯಕ್ಷರಾಗಿ ಗುರುವಾರ ಪ್ರಕಾಶ ರಾಠೋಡ್ ಅವಿರೋಧ ಆಯ್ಕೆಯಾದರು. ಎಸ್ಸಿ ಮೀಸಲು ಸ್ಥಾನಕ್ಕೆ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣಕ್ಕೆ ಪ್ರಕಾಶ ರಾಠೋಡ್ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿರೇಂದ್ರ ಸಿಂಗ್ ಘೋಷಿಸಿದರು. ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಅನೀಲ ವಿರುದ್ಧ ಅವಿಶ್ವಾಸ ಮಂಡಿಸಿದ್ದರಿಂದ ಈ ಸ್ಥಾನ ತೆರವಾಗಿತ್ತು. 21 ಸದಸ್ಯರಲ್ಲಿ ಬಹುತೇಕರು ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ಅವಿರೋಧ ಆಯ್ಕೆ ನಡೆದಿದೆ ಎಂದು ಪಕ್ಷದ ಮುಖಂಡ ವಸಂತ ಬಿರಾದಾರ್ ತಿಳಿಸಿದ್ದಾರೆ. ಶಿವಕುಮಾರ ಪಂಚಾಳ, ಗಣಪತಿ ದೇಶಪಾಂಡೆ, ವಿಲಾಸ ಪಾಟೀಲ್, ಧೂಳಪ್ಪ ಕೋಟೆ, ವಿದ್ಯಾಸಾಗರ ಬ್ಯಾಳೆ, ಓಂಪ್ರಕಾಶ, ರಾಜಕುಮಾರ ಬಾಬಣೆ, ಸಿದ್ದಪ್ಪ ಬ್ಯಾಳೆ ಇತರರಿದ್ದರು.