ಜಿಲ್ಲೆ

ಸಂತ ಅನ್ನಮ್ಮ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಚಾರ್ಲ್ಸ್ ಡಿಸೋಜಾ

ವಿರಾಜಪೇಟೆ: ವಿರಾಜಪೇಟೆ ಪಟ್ಟಣದಲ್ಲಿರುವ ಸಂತ ಅನ್ನಮ್ಮ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತಕ್ಕೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು.

ಸಂಘದ ನೂತನ ಅಧ್ಯಕ್ಷರಾಗಿ ನಿವೃತ್ತ ಪ್ರಾಂಶುಪಾಲ ಚಾರ್ಲ್ಸ್ ಡಿಸೋಜಾ ಹಾಗೂ ಉಪಾಧ್ಯಕ್ಷರಾಗಿ ಈ.ಪಿ. ನೆಲ್ಸನ್ ಅವರನ್ನು ಮುಂದಿನ ಐದು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಯಿತು. ಸಭೆಯಲ್ಲಿದ್ದ ಇತರ ಸದಸ್ಯರ ಒಪ್ಪಿಗೆಯೊಂದಿಗೆ ಸರ್ವಾನುಮತದಿಂದ ಈ ಆಯ್ಕೆ ಪ್ರಕ್ರಿಯೆ ನಡೆಯಿತು

ಸಂಘದ ನೂತನ ಅಧ್ಯಕ್ಷ ಚಾರ್ಲ್ಸ್ ಡಿಸೋಜಾ ಮಾತನಾಡಿ, ಸಂತ ಅನ್ನಮ್ಮ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತವು ಪ್ರಸ್ತುತ 400ಕ್ಕೂ ಅಧಿಕ ಪಡಿತರದಾರರನ್ನು ಹೊಂದಿದ್ದು ಅಕ್ಕಿಯನ್ನು ಪಡಿತರದಾರರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಇನ್ನು ಮುಂದಿನ ದಿವಸಗಳಲ್ಲಿ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಸಗೊಬ್ಬರ, ಕೀಟನಾಶಕಗಳು, ಕೃಷಿ ಉಪಕರಣಗಳನ್ನು ಮಾರಾಟ ಮಾಡುವ ಯೋಜನೆ ಇದ್ದು ರೈತಾಪಿ ವರ್ಗಕ್ಕೆ ಸಹಕರಿಸುವ ಕ್ರಿಯಾಯೋಜನೆಯನ್ನು ಹೊಂದಲಾಗಿದೆ ಎಂದು ಹೇಳಿದರು

ಪ್ರಮುಖರಾದ ಮರ್ವಿನ್ ಲೋಬೋ, ಜೋಕಿಂ ರಾಡ್ರಿಗೀಸ್, ಮಾರ್ಟಿನ್ ಬರ್ನಾಡ್, ಜೋಸೆಫ್, ಮತಿಲ್ಡ ಡಿಸೋಜಾ, ಸಂಘದ ಇತರ ಸದಸ್ಯರು ಹಾಜರಿದ್ದರು.